ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | 2.31 ಕೋಟಿ ಕೊರೊನಾ ಸೋಂಕಿತರು, 8.03 ಲಕ್ಷ ಸಾವು

Last Updated 22 ಆಗಸ್ಟ್ 2020, 4:48 IST
ಅಕ್ಷರ ಗಾತ್ರ

ವಾಷಿಂಗ್ಟನ್: ಜಗತ್ತಿನಾದ್ಯಂತ 2,31,20,216 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 8,03,201 ಮಂದಿ ಮೃತಪಟ್ಟಿದ್ದಾರೆ. ಈ ವರೆಗೆ 1,57,13,254 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೋವಿಡ್‌-19 ವರ್ಡೊಮೀಟರ್‌ ಮಾಹಿತಿ ನೀಡಿದೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕವೊಂದರಲ್ಲೇ 57,96,727 ಸೋಂಕಿತರಿದ್ದು, ಈ ವರೆಗೆ 1,79,200 ಮಂದಿ ಸಾವಿಗೀಡಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 35,36,488 ಪ್ರಕರಣಗಳು ಬೆಳಕಿಗೆ ಬಂದಿವೆ. 26,70,755 ಸೋಂಕಿತರು ಗುಣಮುಖರಾಗಿದ್ದು, 1,13,454 ಜನರು ಮೃತಪಟ್ಟಿದ್ದಾರೆ.

ಭಾರತದಲ್ಲಿ 29,75,701, ರಷ್ಯಾದಲ್ಲಿ 9,46,976, ದಕ್ಷಿಣ ಆಫ್ರಿಕಾದಲ್ಲಿ 6,03,338, ಪೆರುವಿನಲ್ಲಿ 5,76,067, ಸ್ಪೇನ್‌ನಲ್ಲಿ 4,07,879, ಚಿಲಿಯಲ್ಲಿ 3,93,769, ಇಂಗ್ಲೆಂಡ್‌ನಲ್ಲಿ 3,23,313 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 41,405, ಮೆಕ್ಸಿಕೊದಲ್ಲಿ 59,610, ಇಟಲಿಯಲ್ಲಿ 35,427, ಪ್ರಾನ್ಸ್‌ನಲ್ಲಿ 30,503, ಸ್ಪೇನ್‌ನಲ್ಲಿ 28,838, ಪೆರುವಿನಲ್ಲಿ 27,245, ರಷ್ಯಾದಲ್ಲಿ 16,189, ಚಿಲಿಯಲ್ಲಿ 10,723, ದಕ್ಷಿಣ ಆಫ್ರಿಕಾದಲ್ಲಿ 12,843 ಮತ್ತು ಪಾಕಿಸ್ತಾನದಲ್ಲಿ 6,219 ಜನರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT