ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕನ್‌ಪಾಕ್ಸ್‌ನಂತೆ ಸುಲಭವಾಗಿ ಹರಡಬಲ್ಲ ಡೆಲ್ಟಾ ತಳಿ ಹೆಚ್ಚು ಅಪಾಯಕಾರಿ: ವರದಿ

ಅಕ್ಷರ ಗಾತ್ರ

ನ್ಯೂಯಾರ್ಕ್‌: ಚಿಕನ್‌ಪಾಕ್ಸ್‌ನಂತೆ (ಸಿಡುಬು) ಸುಲಭವಾಗಿ ಹರಡಬಲ್ಲ ಕೊರೊನಾ ವೈರಸ್‌ನ ಡೆಲ್ಟಾ ತಳಿಯು ಹೆಚ್ಚು ಅಪಾಯಕಾರಿ ಎಂದು ಅಮೆರಿಕದ 'ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ' (ಸಿಡಿಸಿ) ವರದಿ ನೀಡಿದೆ.

'ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರವು ಹೆಚ್ಚು ಅನಾರೋಗ್ಯವನ್ನು ಉಂಟುಮಾಡಬಹುದು. ಮಾರ್ಸ್‌, ಎಬೋಲಾ, ನೆಗಡಿ ಮತ್ತು ಸಿಡುಬಿಗೆ ಕಾರಣವಾಗುವ ವೈರಸ್‌ಗಳಿಗಿಂತ ಸುಲಭವಾಗಿ ಡೆಲ್ಟಾ ರೂಪಾಂತರವು ಹರಡಬಲ್ಲದು. ಇದು ಚಿಕನ್‌ಪಾಕ್ಸ್‌ನಂತೆ ಸಾಂಕ್ರಾಮಿಕವಾಗಿದೆ' ಎಂದು ಸಿಡಿಸಿ ತಿಳಿಸಿದೆ.

ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡ ಜನರಿಗೂ ಸಹ ಡೆಲ್ಟಾ ರೂಪಾಂತರ ಹರಡಬಹುದು. ಇದನ್ನು ಭಾರತದಲ್ಲಿ ಮೊದಲು ಗುರುತಿಸಲಾಗಿದೆ ಎಂಬ ವಿಚಾರ ವರದಿಯಿಂದ ಬಹಿರಂಗಗೊಂಡಿದೆ.

ಭಾರತ, ಚೀನಾ, ರಷ್ಯಾ, ಇಸ್ರೇಲ್‌ ಮತ್ತು ಬ್ರಿಟನ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸಂಗ್ರಹಿಸಿರುವ ಮಾದರಿಗಳಲ್ಲಿ ಶೇಕಡ 75ರಷ್ಟು ಡೆಲ್ಟಾ ತಳಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

'ವಿಶ್ವದಾದ್ಯಂತ ವೇಗವಾಗಿ ಸೋಂಕು ಹರಡುತ್ತಾ, ಸಾವಿನ ಪ್ರಮಾಣ ಹೆಚ್ಚಳಕ್ಕೂ ಕಾರಣವಾಗಿರುವ ’ಕೋವಿಡ್‌–19’ ಡೆಲ್ಟಾ ರೂಪಾಂತರ ತಳಿಯು ಪ್ರಸ್ತುತ 104 ರಾಷ್ಟ್ರಗಳಲ್ಲಿ ವಿಸ್ತರಿಸಿದ್ದು, ಶೀಘ್ರದಲ್ಲೇ ಇದೊಂದು ಪ್ರಬಲ ರೂಪಾಂತರ ತಳಿಯಾಗಿ, ವಿಶ್ವವವನ್ನೇ ಕಾಡುವ ಸಾಧ್ಯತೆ ಇದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್‌ ಗೆಬ್ರೇಷಿಯಸ್‌ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT