ಸಿಂಗಪುರ: ಕೋವಿಡ್ 19 ಸಾಂಕ್ರಾಮಿಕ ರೋಗದ ಎರಡನೇ ಅಲೆಫಿಲಿಪ್ಪೀನ್ಸ್ಗೆ ಹಾನಿಕಾರಕವಾಗಲಿದೆ ಎಂದು ಎಚ್ಚರಿಸಿರುವಫಿಲಿಪ್ಪೀನ್ಸ್ಅಧ್ಯಕ್ಷರೊಡ್ರಿಗೋ ಡುಟರ್ಟೆ ಅವರು, ಕೋವಿಡ್ 19ಲಸಿಕೆಹಾಕಿಸಿಕೊಳ್ಳದ ಫಿಲಿಪಿನೋಗಳನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಲಸಿಕೆಹಾಕಿಸಿಕೊಳ್ಳದವರು ದೇಶ ತೊರೆಯಲು ಸೂಚಿಸಿರುವ ಅವರು, ‘ಭಾರತ, ಅಮೆರಿಕ ಅಥವಾ ನಿಮಗೆ ಬೇಕಾದ ಕಡೆಗೆ ಹೋಗಬಹುದು’ ಎಂದು ಕಠಿಣ ಸಂದೇಶ ನೀಡಿದ್ದಾರೆ.

‘ದೇಶವು ರಾಷ್ಟ್ರೀಯ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ದೇಶದಲ್ಲಿ ಕೊರೊನಾ ವೈರಸ್ ಇರುವುದರಿಂದ ನಾವು ನಮ್ಮ ಪ್ರಯತ್ನಗಳನ್ನು ಮೂರು ಪಟ್ಟು ಹೆಚ್ಚಿಸಬೇಕು’ ಎಂದು ಡುಟರ್ಟೆ ಹೇಳಿರುವುದಾಗಿ ಮನಿಲಾದ ಮಾಧ್ಯಮ ವರದಿಗಳು ತಿಳಿಸಿವೆ. ಈ ಭಾಷಣ ಸೋಮವಾರ ದೂರದರ್ಶನದ ಮೂಲಕ ಸಾರ್ವಜನಿಕರನ್ನು ಉದ್ದೇಶಿಸಿ ಮಾಡಿರುವುದಾಗಿದೆ ಎಂದು ವರದಿಗಳು ಹೇಳಿವೆ.

‘ನನ್ನನ್ನು ತಪ್ಪಾಗಿ ಭಾವಿಸಬೇಡಿ. ಈ ದೇಶದಲ್ಲಿ ಬಿಕ್ಕಟ್ಟು ಎದುರಾಗಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯೂ ಇದೆ. ನೀವುಲಸಿಕೆಪಡೆಯಲು ಬಯಸದಿದ್ದರೆ, ನಾನು ನಿಮ್ಮನ್ನು ಬಂಧಿಸುವೆ. ಅಲ್ಲದೆ ನಿಮ್ಮ ರಟ್ಟೆಗೆ ನಾನೇಲಸಿಕೆಚುಚ್ಚುತ್ತೇನೆ. ನೀವು ಕೀಟಗಳಿದ್ದಂತೆ. ನಾವು ಈಗಾಗಲೇ ತೊಂದರೆಯಲ್ಲಿದ್ದು, ನೀವು ಅದರ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತಿದ್ದೀರಿ’ ಎಂದು ಡುಟರ್ಟೆ ಹೇಳಿರುವುದಾಗಿ ಇನ್ಕ್ವೈರರ್ ಡಾಟ್ ನೆಟ್ ವರದಿ ಮಾಡಿದೆ.

ಕೋವಿಡ್ಲಸಿಕೆಸುರಕ್ಷಿತವಲ್ಲ ಎನ್ನುವ ಭಯದಿಂದಾಗಿಫಿಲಿಪ್ಪೀನ್ಸ್ದೇಶದಲ್ಲಿ ಅರ್ಧಕ್ಕೂ ಹೆಚ್ಚು ಜನರುಲಸಿಕೆಪಡೆಯಲು ಸಿದ್ಧರಿಲ್ಲವೆಂಬ ಅಧ್ಯಯನ ವರದಿಯನ್ನು ಸ್ಥಳೀಯ ಮಾಧ್ಯಮಗಳುಉಲ್ಲೇಖಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.