ಬುಧವಾರ, ಡಿಸೆಂಬರ್ 2, 2020
23 °C

Covid World Update| 50 ಸಾವಿರ ಸಾವು ಕಂಡ ಜಗತ್ತಿನ ಐದನೇ ದೇಶ ಬ್ರಿಟನ್‌

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ಕೊರೊನಾ ವೈರಸ್‌ ಕಾರಣದಿಂದ ಸಂಭವಿಸಿದ ಸಾವುಗಳ ಸಂಖ್ಯೆ ಗುರುವಾರ ಬ್ರಿಟನ್‌ನಲ್ಲಿ 50 ಸಾವಿರದ ಗಡಿ ದಾಟಿದೆ. ಈ ಅಪಖ್ಯಾತಿಯ ಮೈಲುಗಲ್ಲು ತಲುಪಿದ ಯೂರೋಪ್‌ನ ಮೊದಲ ರಾಷ್ಟ್ರ ಬ್ರಿಟನ್‌ ಎನಿಸಿಕೊಂಡಿದೆ.

ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ವಾರದ 22,950 ಹೊಸ ಪ್ರಕರಣಗಳೊಂದಿಗೆ ಬ್ರಿಟನ್‌ನ ಒಟ್ಟಾರೆ ಪಾಸಿಟಿವ್‌ ಪ್ರಕರಣ 12,56,725ಕ್ಕೆ ಏರಿದೆ.

ಮಾರಣಾಂತಿಕ ಸೋಂಕಿನಿಂದಾಗಿ ಬುಧವಾರ 595 ಸಾವುಗಳು ಸಂಭವಿಸಿದ್ದು, ಒಟ್ಟಾರೆ ಸೋಂಕಿನಿಂದ ಸತ್ತವರ ಸಂಖ್ಯೆ ಅಲ್ಲಿ 50,365 ಕ್ಕೆ ತಲುಪಿದೆ. ಅಮೆರಿಕ, ಬ್ರೆಜಿಲ್, ಭಾರತ ಮತ್ತು ಮೆಕ್ಸಿಕೊ ನಂತರ 50,000 ಸಾವು ಕಂಡ ಐದನೇ ರಾಷ್ಟ್ರ ಬ್ರಿಟನ್‌ ಎನಿಸಿಕೊಂಡಿದೆ.

ಈ ಕುರಿತು ಮಾತನಾಡಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, 'ನಾವು ಇನ್ನೂ ಇದರಿಂದ ಹೊರಬಂದಿಲ್ಲ. ಪ್ರತಿ ಸಾವು ಒಂದು ದುರಂತ. ಅಗಲಿದ ಪ್ರತಿಯೊಬ್ಬರಿಗಾಗಿ ನಾವು ಶೋಕ ವ್ಯಕ್ತ ಪಡಿಸುತ್ತಿದ್ದೇವೆ' ಎಂದು ಜಾನ್ಸನ್ ಹೇಳಿದ್ದಾರೆ.

ಇನ್ನು ಜಗತ್ತಿನ ಒಟ್ಟಾರೆ ಸೋಂಕಿತರ ಸಂಖ್ಯೆ ಗುರುವಾರದ ಹೊತ್ತಿಗೆ 5.27 ಕೋಟಿ (5,27,01,532) ತಲುಪಿದೆ. ಸತ್ತವರ ಸಂಖ್ಯೆ 12,93,542ಕ್ಕೆ ಏರಿಕೆಯಾಗಿದೆ. 36,834,986 ಮಂದಿ ಈ ವರೆಗೆ ಗುಣಮುಖರಾಗಿದ್ದಾರೆ.

1,45,73,004 ಸಕ್ರೀಯ ಪ್ರಕರಣಗಳು ವಿಶ್ವದಾದ್ಯಂತ ಇದ್ದರೆ, ಈ ಪೈಕಿ 94,770 ಮಂದಿ ಸ್ಥಿತಿ ಗಂಭೀರವಾಗಿದೆ. 3,68,34,986 ಮಂದಿ ಗುಣಮುಖರಾಗಿದ್ದಾರೆ.

ವಿಶ್ವದಲ್ಲೇ ಅತಿಹೆಚ್ಚು ಕೊರೊನಾ ವೈರಸ್‌ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಅಲ್ಲಿ 1,07,28,317 ಪ್ರಕರಣಗಳು ಈ ವರೆಗೆ ವರದಿಯಾಗಿವೆ. 2,47,560ಮಂದಿ ಮಹಾಮಾರಿಗೆ ಪ್ರಾಣ ತೆತ್ತಿದ್ದಾರೆ.

ನಂತರದ ಸ್ಥಾನದಲ್ಲಿ ಭಾರತ ಇದ್ದು, ಇಲ್ಲಿ 87,01,780 ಸೋಂಕು ಪ್ರಕರಣಗಳಿವೆ. 1,28,299 ಮಂದಿ ಈ ವರೆಗೆ ಮೃತಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ 57,51,485 ಪ್ರಕರಣಗಳಿವೆ. 163,492 ಮಂದಿ ಅಸುನೀಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು