ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 world update: 2.43 ಕೋಟಿ ಸೋಂಕಿತರು, ಅಮೆರಿಕದಲ್ಲಿ ಅಧಿಕ

Last Updated 28 ಆಗಸ್ಟ್ 2020, 5:31 IST
ಅಕ್ಷರ ಗಾತ್ರ

ವಾಷಿಂಗ್ಟನ್:2020 ಡಿಸೆಂಬರ್ 1ರ ಹೊತ್ತಿಗೆ ಅಮೆರಿಕದಲ್ಲಿ ಕೋವಿಡ್‌ನಿಂದ 31,7,697 ಸಾವು ಸಂಭವಿಸಲಿದೆ ಎಂದು ಯುನಿವರ್ಸಿಟಿ ಆಫ್ ವಾಷಿಂಗ್ಟನ್ ಮುನ್ಸೂಚನೆ ನೀಡಿದೆ.ಕೊರೊನಾ ಸೋಂಕಿತರು ಅಮೆರಿಕದಲ್ಲಿ ಹೆಚ್ಚುತ್ತಲೇ ಇದ್ದು ಸೋಂಕಿತರ ಸಂಖ್ಯೆ 58,66,214 ಏರಿದೆ. ಈವರೆಗೆ 18,0814ಮಂದಿ ಮೃತಪಟ್ಟಿದ್ದಾರೆ.

ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ಸಂಪನ್ಮೂಲ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಜಗತ್ತಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,43,61,904 ಆಗಿದೆ. ಇಲ್ಲಿವರೆಗೆ 8,30,205 ಮಂದಿ ಸಾವಿಗೀಡಾಗಿದ್ದಾರೆ.

ಅಮೆರಿಕದ ನಂತರದಸ್ಥಾನದಲ್ಲಿ ಬ್ರೆಜಿಲ್ ಇದ್ದು ಇಲ್ಲಿ ಸೋಂಕಿತರ ಸಂಖ್ಯೆ 37,61,391,ಮೃತರ ಸಂಖ್ಯೆ 11,8,649 ಆಗಿದೆ.ಮೆಕ್ಸಿಕೊದಲ್ಲಿ 6,026 ಹೊಸ ಪ್ರಕರಣಗಳು ವರದಿ ಆಗಿದ್ದು 518 ಸಾವು ವರದಿ ಆಗಿದೆ.

ಕೊರೊನಾವೈರಸ್ ಚೀನಾದಲ್ಲಿ ಹುಟ್ಟಿದೆ ಎಂಬುದು ಅನುಮಾನ
ಕೊರೊನಾವೈರಸ್ ಚೀನಾದಲ್ಲಿ ಹುಟ್ಟಿದ್ದು ಎಂಬುದ ಬಗ್ಗೆ ಚೀನಾದ ಹಿರಿಯ ರಾಜತಾಂತ್ರಿಕ ವಾಂಗ್ ಯಿ ಅನುಮಾನ ವ್ಯಕ್ತಪಡಿಸಿದ್ದಾರೆ
ಆರೋಗ್ಯ ತಜ್ಞರು ಮತ್ತು ವಿದೇಶಿ ಸರ್ಕಾರಗಳ ಅಭಿಪ್ರಾಯಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು ಚೀನಾದಲ್ಲಿ ಕೊರೊನಾ ವೈರಸ್ ಮೊದಲು ಹುಟ್ಟಿಕೊಂಡಿದೆ ಎಂದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ. ನಾರ್ವೆ ಭೇಟಿ ವೇಳೆ ಮಾತನಾಡಿದ ವಾಂಗ್, ವೈರಸ್ ಕಂಡು ಬಂದಿದ್ದು ಮೊದಲು ಚೀನಾದಲ್ಲಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದರೂ ಆ ವೈರಸ್ ಚೀನಾದಲ್ಲಿ ಹುಟ್ಟಿಕೊಂಡಿದೆ ಎಂಬುದು ಇದರ ಅರ್ಥವಲ್ಲ ಎಂದಿದ್ದಾರೆ.

ಟೆಕ್ಸಾಸ್, ಫ್ಲೋರಿಡಾ, ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಅಮೆರಿಕದ ಹೊಸ ಕೋವಿಡ್ -19 ಪರೀಕ್ಷಾ ಯೋಜನೆಯನ್ನು ಅನುಸರಿಸುವುದಿಲ್ಲ

ಕೋವಿಡ್ 19 ಪರೀಕ್ಷೆಯನ್ನು ಕಡಿಮೆ ಮಾಡುವಂತೆ ಅಮೆರಿಕ ಸರ್ಕಾರ ಆರೋಗ್ಯ ಅಧಿಕಾರಿಗಳು ಹೇಳಿದ್ದು ಟೆಕ್ಸಾಸ್ ಸೇರಿದಂತೆ ಅಮೆರಿಕದ ಹಲವಾರು ದೊಡ್ಡ ರಾಜ್ಯಗಳು ಇದಕ್ಕೆ ಕಿವಿಗೊಡುತ್ತಿಲ್ಲ. ಕೋವಿಡ್ ಪರೀಕ್ಷೆ ಕಡಿಮೆ ಮಾಡುವ ಬಗ್ಗೆ ಟ್ರಂಪ್ ಸರ್ಕಾರದ ನಿರ್ಧಾರವನ್ನು ಈ ರಾಜ್ಯಗಳು ಖಂಡಿಸಿವೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ (ಸಿಡಿಸಿ) ಹೊಸ ಮಾರ್ಗದರ್ಶನದ ಹೊರತಾಗಿಯೂ ಕೋವಿಡ್-19 ರೋಗ ಲಕ್ಷಣವಿಲ್ಲದ ಜನರನ್ನು ಪರೀಕ್ಷಿಸುವುದನ್ನು ಮುಂದುವರಿಸಲು ಕ್ಯಾಲಿಫೋರ್ನಿಯಾ, ಕನೆಕ್ಟಿಕಟ್, ಫ್ಲೋರಿಡಾ, ಇಲಿನಾಯ್ಸ್, ಟೆಕ್ಸಾಸ್, ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್ ತೀರ್ಮಾನಿಸಿದೆ.

ದಕ್ಷಿಣ ಕೊರಿಯಾದಲ್ಲಿ ಅಂತರ ಕಾಯ್ದುಕೊಳ್ಳುವ ಕ್ರಮ ಇಲ್ಲ
ಕೊರೊನಾವೈರಸ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದರೂಸೋಂಕು ಹರಡದಂತೆ ಅಂತರ ಕಾಯ್ದುಕೊಳ್ಳುವ ಕ್ರಮವನ್ನು ನಿಲ್ಲಿಸಲು ದಕ್ಷಿಣ ಕೊರಿಯಾ ತೀರ್ಮಾನಿಸಿದೆ. ವಾರಾಂತ್ಯದಲ್ಲಿ ಮುಕ್ತಾಯಗೊಳ್ಳಲಿರುವ 2 ನೇ ಹಂತದ ಮಾರ್ಗಸೂಚಿಯಲ್ಲಿ ಅಂತರ ಕಾಯ್ದುಕೊಳ್ಳುವ ಕ್ರಮವನ್ನು ಕನಿಷ್ಟ ಒಂದು ವಾರದವರೆಗೆ ವಿಸ್ತರಿಸಲಿದೆ ಎಂದು ಪ್ರಧಾನಿ ಚುಂಗ್ ಸೇ ಕ್ಯೂ ಹೇಳಿದ್ದಾರೆ.
ಮೂರನೇ ಹಂತದ ಮಾರ್ಗಸೂಚಿಯಲ್ಲಿ ಅಂತರ ಕಾಯ್ದುಕೊಳ್ಳುವ ಕ್ರಮವನ್ನು ಕೈ ಬಿಡುವ ಬಗ್ಗೆ ಚುಂಗ್ ಸರ್ಕಾರ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT