ವಾಷಿಂಗ್ಟನ್ : ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ, ಚೀನಾ ಸೇರಿದಂತೆ ಐವತ್ತು ರಾಷ್ಟ್ರಗಳಿಗೆ ಪ್ರಯಾಣ ಬೆಳೆಸದಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.

ಈ ಸಂಬಂಧ ಜಾರಿಗೊಳಿಸಿದ್ದ ಜಾಗತಿಕ ಪ್ರಯಾಣ ಮಾರ್ಗಸೂಚಿಯನ್ನು ರದ್ದುಗೊಳಿಸಿರುವ ಅಮೆರಿಕ, ಮಾರ್ಚ್ ತಿಂಗಳಲ್ಲಿ ಅನುಷ್ಠಾನಗೊಳಿಸಿದ್ದ ಹಳೆಯ ಮಾರ್ಗಸೂಚಿಯನ್ನೇ ಪುನಃ ಯಥಾವತ್ತು ಜಾರಿಗೊಳಿಸಿದೆ.

ಹಿಂದಿನ ಮಾರ್ಗಸೂಚಿಯಲ್ಲಿದ್ದ ಭಾರತ ಮತ್ತು ಚೀನಾ ಸೇರಿದಂತೆ ಐವತ್ತು ರಾಷ್ಟ್ರಗಳಿಗೆ ಪ್ರಯಾಣ ಮಾಡಬಾರದೆಂಬ ನಿರ್ಬಂಧನೆಯ ಅಂಶಗಳನ್ನುಈ ಮಾರ್ಗಸೂಚಿಯಲ್ಲಿ ಉಳಿಸಿಕೊಂಡಿದೆ.

ಸೆಂಟರ್ ಫಾರ್ ಡೀಸಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸೊಸೈಟಿ ತಿಳಿಸಿರುವ ಸೂಚನೆಯಲ್ಲಿ ‘ಕೋವಿಡ್ 19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಜತೆಗೆ, ಭಯೋತ್ಪಾದನೆಯ ಭೀತಿ ಇರುವುದರಿಂದ, ಭಾರತಕ್ಕೆ ಪ್ರಯಾಣ ಬೆಳೆಸದಂತೆ‘ ಅಮೆರಿಕನ್ನರಿಗೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.