ಮಂಗಳವಾರ, ಜನವರಿ 18, 2022
27 °C

ಡೆಲ್ಟಾಕ್ರಾನ್ ರೂಪಾಂತರವಲ್ಲ, ಪ್ರಯೋಗಾಲಯದ ಸೃಷ್ಟಿ: ತಜ್ಞರ ಅಭಿಪ್ರಾಯ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಲಂಡನ್: ‘ಡೆಲ್ಟಾಕ್ರಾನ್’ ಎಂಬುದು ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿಯಲ್ಲ. ಅದು ಪ್ರಯೋಗಾಲದಲ್ಲಿ ಸೃಷ್ಟಿಯಾಗಿರುವುದು ಎಂದು ಬ್ರಿಟನ್‌ನ ವೈರಾಣು ತಜ್ಞರೊಬ್ಬರು ಹೇಳಿದ್ದಾರೆ.

‘ಡೆಲ್ಟಾಕ್ರಾನ್’ ಎಂಬ ಹೊಸ ರೂಪಾಂತರ ತಳಿಯನ್ನು ತಮ್ಮ ತಂಡ ಪತ್ತೆ ಮಾಡಿದೆ ಎಂದು ‘ಸಿಪ್ರಸ್‌’ನ ವಿಜ್ಞಾನಿಯೊಬ್ಬರು ಇತ್ತೀಚೆಗೆ ಹೇಳಿದ್ದರು.

ಮಾಧ್ಯಮಗಳಲ್ಲಿ ವರದಿಯಾಗಿರುವ ‘ಡೆಲ್ಟಾಕ್ರಾನ್’ ಹೊಸ ರೂಪಾಂತರವಲ್ಲ. ಅದು ಪ್ರಯೋಗಾಲಯದಲ್ಲಿ ಮಿಶ್ರಗೊಂಡು ಸೃಷ್ಟಿಯಾಗಿರುವುದು ಎಂಬುದು ಸ್ಪಷ್ಟವಾಗಿದೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ವೈರಾಣು ತಜ್ಞ ಟಾಮ್ ಪೀಕಾಕ್ ಹೇಳಿದ್ದಾರೆ.

‘ಪ್ರಯೋಗಾಲಯದಲ್ಲಿನ ಮಿಶ್ರಣದಿಂದಾಗಿ ಉಂಟಾಗುವ ರೂಪಾಂತರಗಳು ಅಸಾಮಾನ್ಯವೇನಲ್ಲ. ಸಾಧಾರಣವಾಗಿ ಇಂಥವುಗಳ ಬಗ್ಗೆ ಯಾರೂ ಹೆಚ್ಚು ಗಮನಹರಿಸುವುದಿಲ್ಲ’ ಎಂದು ಪೀಕಾಕ್ ಹೇಳಿದ್ದಾರೆ.

ಓಮೈಕ್ರಾನ್ ಕೂಡ ದೀರ್ಘ ಸಮಯದವರೆಗೆ ಹರಡಲಾರದು. ಹೊಸ ರೂಪಾಂತರವನ್ನು ಸೃಷ್ಟಿಸುವ ಮಟ್ಟಕ್ಕೆ ಹರಡಲಾರದು ಎಂದೂ ಪೀಕಾಕ್ ಅಭಿಪ್ರಾಯಪಟ್ಟಿದ್ದಾರೆ.

ಕೆಲವು ವಾರಗಳಿಂದೀಚೆಗಷ್ಟೇ ಓಮೈಕ್ರಾನ್‌ ಹರಡುತ್ತಿದ್ದು, ಅದು ಇನ್ನೂ ಹೊಸ ರೂಪಾಂತರ ಸೃಷ್ಟಿಗೆ ಕಾರಣವಾಗಿರುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇನ್ನೂ ಹೇಳಿಕೆ ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು