ಗುರುವಾರ , ನವೆಂಬರ್ 26, 2020
20 °C

ಮಾಜಿ ಪ್ರಧಾನಿ ಷರೀಫ್‌ ಹಸ್ತಾಂತರ ಕೋರಿ ಮೂರನೇ ಬಾರಿ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಹಸ್ತಾಂತರಿಸುವಂತೆ ಪಾಕಿಸ್ತಾನ ಮೂರನೇ ಬಾರಿ ಬ್ರಿಟನ್‌ಗೆ ಮನವಿ ಮಾಡಿದೆ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ಇಲ್ಲಿರುವ ಬ್ರಿಟಿಷ್‌ ಹೈಕಮಿಷನರ್‌ ಅವರಿಗೆ ಈ ಕುರಿತ ಮನವಿ ಪತ್ರವನ್ನು ಸಲ್ಲಿಸಲಾಗಿದೆ ಎಂದು ಡಾನ್‌ ದೈನಿಕ ವರದಿ ಮಾಡಿದೆ.

‘ಷರೀಫ್‌ ಅವರು ಚಿಕಿತ್ಸೆ ಕಾರಣ ನೀಡಿ ಕಳೆದ ನವೆಂಬರ್‌ನಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಕೂಡಲೇ ಅವರ ವೀಸಾ ರದ್ದು ಮಾಡಬೇಕು. ಬ್ರಿಟನ್‌ನ ವಲಸೆ ಕಾಯ್ದೆ 1974 ಅನ್ವಯ, ನಾಲ್ಕಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಯಾವುದೇ ವ್ಯಕ್ತಿಯನ್ನು ಆತನ/ಆಕೆಯ ದೇಶಕ್ಕೆ ಹಸ್ತಾಂತರಿಸಬೇಕು. ಇದನ್ನು ಪರಿಗಣಿಸಿ ಕೂಡಲೇ ಷರೀಫ್‌ ಅವರನ್ನು ಹಸ್ತಾಂತರಿಸಬೇಕು’ ಎಂದು ಮನವಿಪತ್ರದಲ್ಲಿ ಕೋರಲಾಗಿದೆ.

ಪಾಕಿಸ್ತಾನ ಮುಸ್ಲಿಂ ಲೀಗ್‌ (ನವಾಜ್‌) ವರಿಷ್ಠ, 70 ವರ್ಷದ ನವಾಜ್‌ ಷರೀಫ್‌ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸುಪ್ರೀಂಕೋರ್ಟ್‌ ಕೋರ್ಟ್ 2017ರಲ್ಲಿ ಘೋಷಿಸಿದ ನಂತರ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲಾಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು