ಶುಕ್ರವಾರ, ಡಿಸೆಂಬರ್ 4, 2020
24 °C

ಫಲಿತಾಂಶ ನಂತರ ಕಾನೂನು ಹೋರಾಟ: ಡೊನಾಲ್ಡ್ ಟ್ರಂಪ್ ಇಂಗಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫಾಯೆಟ್ಟೆವಿಲೆ: ‘ನಿಗದಿತ ಸಮಯಕ್ಕೂ ಮೊದಲೇ ಅಧ್ಯಕ್ಷ ಸ್ಥಾನದ ಚುನಾವಣೆ ಫಲಿತಾಂಶ ಘೋಷಿಸಲು ಉದ್ದೇಶಿಸಿದ್ದೇನೆ’ ಎಂಬ ವರದಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ನಿರಾಕರಿಸಿದ್ದಾರೆ. ‘ಇಲ್ಲ, ಅದು ಆಧಾರರಹಿತ’ ಎಂದು ಹೇಳಿದರು.

ಆದರೆ, ಚುನಾವಣೆ ನಂತರ ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆದಿದೆ ಎಂಬ ಇಂಗಿತವನ್ನು ಅವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ. ಪ್ರಚಾರದ ನಂತರ ಉತ್ತರ ಕರೊಲಿನಾದ ವಿಮಾನನಿಲ್ದಾಣದಲ್ಲಿ ಅವರು ಮಾತನಾಡಿದರು.

‌‌‘ಮತದಾನ ಹಾಗೂ ನಂತರ ಮತಪತ್ರಗಳ ಸಾಗಣೆ, ಎಣಿಕೆ, ಫಲಿತಾಂಶದ ಪ್ರಕಟಣೆಯ ನಡುವೆ ಅಂತರವಿದೆ. ಈ ಅವಧಿಯಲ್ಲಿ ಏನಾಗುತ್ತದೆ ಎಂಬುದು ಮುಂದಿನ ಬೆಳವಣಿಗೆಗೆ ಕಾರಣವಾಗಲಿದೆ’ ಎಂದು ತಿಳಿಸಿದರು.

ಚುನಾವಣೆಯ ನಂತರ ಆ ರಾತ್ರಿಯೇ ನಾವು ವಕೀಲರನ್ನು ಭೇಟಿ ಮಾಡಲಿದ್ದೇವೆ ಎಂದು ಟ್ರಂಪ್ ಹೇಳಿದರು. ವಿವಿಧ ರಾಜ್ಯಗಳಿಂದ ಚುನಾವಣೆ ದಿನದ ಮಾರನೇ ದಿನ ಮತಪತ್ರಗಳನ್ನು ತರಲು ಅ‘ವಕಾಶ ನೀಡುವ ಸುಪ್ರೀಂ ಕೋರ್ಟ್ನ ತೀರ್ಮಾನವನ್ನು ಟ್ರಂಪ್ ಅವರು ಟೀಕಿಸಿದ್ದಾರೆ.

‌‘ನನ್ನ ಪ್ರಕಾರ, ಆ ಅವಧಿಯಲ್ಲಿ ದುರ್ಬಳಕೆ ಆಗುವ ಸಂಭವವಿದೆ. ಈಗಿನ ಕಂಪ್ಯೂಟರ್ ಕಾಲದಲ್ಲಿಯೂ ಮತದಾನ ನಡೆದ ದಿನದ ರಾತ್ರಿಯೇ ಫಲಿತಾಂಶ ಲಭ್ಯವಾಗುವುದಿಲ್ಲ ಎಂಬುದೇ ಆತಂಕದ ಸ್ಥಿತಿ’ ಎಂದು ಟ್ರಂಪ್‌ ಅವರು ಪ್ರತಿಕ್ರಿಯಿಸಿದರು.

‘ಸುಪ್ರೀಂ ಕೋರ್ಟ್ ತೀರ್ಮಾನ ಟೀಕಿಸಿದ ಅವರು, ನೀವು ಎರಡು, ಮೂರು ರಾಜ್ಯಗಳಲ್ಲಿ ಎಣಿಕೆ ಪ್ರಕ್ರಿಯೆ ನಡೆಸುತ್ತೀರಿ. ಹೇಗೆ ನಡೆಯಲಿದೆ, ಎಲ್ಲಿ ಎಣಿಕೆ ನಡೆಯಲಿದೆ ಎಂಬುದು ತಿಳಿದಿಲ್ಲ. ಇಡೀ ಜಗತ್ತು ಫಲಿತಾಂಶ ನಿರೀಕ್ಷಿಸುತ್ತಿರುತ್ತದೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ವಂಚನ ಅಥವಾ ದುರ್ಬಳಕೆ ಆಗುವ ಸಾಧ್ಯತೆಗಳು ಇವೆ’ ಎಂದು ಅವರು ಪ್ರತಿಕ್ರಿಯಿಸಿದರು.

ಚುನಾವಣೆಯಲ್ಲಿ ತನ್ನ ಪರವಾಗಿ ಉತ್ತಮ ಪ್ರತಿಕ್ರಿಯೆ ಇದೆ. ದೊಡ್ಡ ಪ್ರಮಾಣದಲ್ಲಿ ಸಮೂಹ ಸೇರುತ್ತಿದೆ. ಚಳಿಯ ವಾತಾವರಣದಲ್ಲಿಯೂ ಜನರು ಪರಿಸ್ಥಿತಿಗೆ ಹೊಂದಿಕೊಂಡು ಸ್ಪಂದಿಸುತ್ತಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು