ಗುರುವಾರ , ಜನವರಿ 21, 2021
18 °C

ಡೊನಾಲ್ಡ್ ಟ್ರಂಪ್ 'ಕರ್ತವ್ಯಕ್ಕೆ ಯೋಗ್ಯನಲ್ಲ': ಜೋ ಬೈಡನ್

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಕರ್ತವ್ಯಕ್ಕೆ ಯೋಗ್ಯನಲ್ಲ' ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಆರೋಪ ಮಾಡಿದ್ದಾರೆ. ಆದರೂ ಎರಡನೇ ಬಾರಿಗೆ ದೋಷಾರೋಪ ಪಟ್ಟಿ ಸಲ್ಲಿಸಬೇಕೆಂಬ ಡೆಮಾಕ್ರಾಟಿಕ್ ಕರೆಯನ್ನು ಅನುಮೋದಿಸಲು ನಿರಾಕರಿಸಿದರು.

ಡೊನಾಲ್ಡ್ ಟ್ರಂಪ್ ಬೆಂಬಲಿಗರು ಬುಧವಾರ ಅಮೆರಿಕ ಕ್ಯಾಪಿಟಲ್ ಕಟ್ಟಡಕ್ಕೆ ದಾಳಿ ನಡೆಸಿ ಹಿಂಸಾಚಾರ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಟ್ರಂಪ್ ವಿರುದ್ಧ ದೋಷಾರೋಪಣೆ ಸಲ್ಲಿಸಲು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಅವರು ಚೇಂಬರ್ ಡೆಮಾಕ್ರಟಿಕ್ ಕೋಕಸ್ ನಡುವಣ ಸಭೆಯ ನಂತರ ಜೋ ಬೈಡನ್ ಪ್ರತಿಕ್ರಿಯೆ ನೀಡಿದರು.

ಡೊನಾಲ್ಡ್ ಟ್ರಂಪ್ ಈ ಕೆಲಸಕ್ಕೆ ಯೋಗ್ಯನಲ್ಲ ಎಂದು ನಾನು ಬಹಳ ಸಮಯದಿಂದ ಯೋಚಿಸಿದ್ದೆ. ಹಾಗೊಂದು ವೇಳೆ ಆರು ತಿಂಗಳುಗಳು ಬಾಕಿ ಉಳಿದಿದ್ದರೆ ನಮ್ಮಿಂದಾಗುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗ ಎರಡು ವಾರಗಿಂತಲೂ ಕಡಿಮೆ ಸಮಯವಿರುವ ಕಾರಣ, ಅಧಿಕಾರ ವಹಿಸಿಕೊಳ್ಳುವದರತ್ತ ಗಮನ ಕೇಂದ್ರಿಕರಿಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: 

ಜನವರಿ 20ರಂದು ಟ್ರಂಪ್ ಅಧಿಕಾರ ಕೊನೆಗೊಳ್ಳಲಿದೆ. 2024ರಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸದಂತೆ ತಡೆ ಹಿಡಿಯುವ ಸಾಧ್ಯತೆಯಿದೆ. ಎರಡು ಬಾರಿ ದೋಷಾರೋಪ ಎದುರಿಸಲಿರುವ ಏಕ ಮಾತ್ರ ಅಧ್ಯಕ್ಷ ಟ್ರಂಪ್ ಅವರಾಗಲಿದ್ದು, 2019ರಲ್ಲಿ ಕೊನೆಯ ಬಾರಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಟ್ರಂಪ್ ಅವರನ್ನು ವಜಾ ಮಾಡಲು ಕ್ಯಾಬಿನೆಟ್ ಪ್ರಯತ್ನಿಸದಿದ್ದರೆ ಮುಂದಿನ ವಾರದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಡೆಮಾಕ್ರಾಟ್‌ಗಳು ಚರ್ಚಿಸುತ್ತಿದ್ದಾರೆ.

ಅಮೆರಿಕ ಇತಿಹಾಸದಲ್ಲೇ ಅತ್ಯಂತ ಕರಾಳ ಘಟನೆ ಎಂಬಂತೆ ಬುಧವಾರ ನಡೆದ ಟ್ರಂಪ್ ಬೆಂಬಲಿಗರ ದಾಳಿಯಲ್ಲಿ, ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಐವರು ಮೃತಪಟ್ಟಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು