ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾ ಹ್ಯಾರಿಸ್ ಅವರಿ‌ಗಿಂತ, ನನ್ನ ಜೊತೆ ಹೆಚ್ಚು ಭಾರತೀಯರು ಇದ್ದಾರೆ: ಟ್ರಂಪ್

Last Updated 15 ಆಗಸ್ಟ್ 2020, 14:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕಾಗಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿರುವಕಮಲಾ ಹ್ಯಾರಿಸ್ ಅವರು ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಜೋ ಬಿಡನ್‌ಗಿಂತಲೂ ಕೆಟ್ಟವರು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ.

ಕಮಲಾ ಹ್ಯಾರಿಸ್‌ ಅವರ ವಿರುದ್ಧ ಕಿಡಿಕಾರಿರುವ ಟ್ರಂಪ್‌, ಆಕೆಯ ಜೊತೆಗಿರುವವರಿಗಿಂತಲೂ ಹೆಚ್ಚು ಭಾರತೀಯರು ನನ್ನ ಜೊತೆ ಇದ್ದಾರೆ ಎಂದು ಹೇಳಿಕೊಂಡಿದ್ದಾರೆ.

ನ್ಯೂಯಾರ್ಕ್‌ನ ಪೊಲೀಸ್ ಬೆನೆವೊಲೆಂಟ್ ಅಸೋಸಿಯೇಷನ್ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಟ್ರಂಪ್‌,‘ಒಂದು ವೇಳೆ ಜೋ ಬಿಡೆನ್‌ ಅಧ್ಯಕ್ಷರಾಗಿ ಆಯ್ಕೆಯಾದರೆ, ಅಮೆರಿಕದಾದ್ಯಂತ ಇರುವ ಪ್ರತಿಯೊಂದು ಪೊಲೀಸ್‌ ಠಾಣೆಯನ್ನೂ ಮುಚ್ಚುವುದಕ್ಕೆ ಅನುಮತಿ ನೀಡುವ ಶಾಸನವನ್ನು ಜಾರಿಗೊಳಿಸಲಿದ್ದಾರೆ. ಬಹುಶಃ ಆಕೆ (ಕಮಲಾ ಹ್ಯಾರಿಸ್‌) ಬಿಡೆನ್‌ಗಿಂತಲೂ ಕೆಟ್ಟವರು.ಅವರು (ನಾನು) ಭಾರತೀಯ ಮೂಲದ ಸದಸ್ಯರು. ಆದರೂ, ಅವರಿಗಿಂತ ಹೆಚ್ಚು ಭಾರತೀಯರು ನನ್ನ ಜೊತೆ ಇದ್ದಾರೆ’ ಎಂದು ಹೇಳಿದ್ದಾರೆ.

ಜಮೈಕಾ ಮೂಲದ ತಂದೆ, ಭಾರತ ಮೂಲದ ತಾಯಿ ದಂಪತಿಗೆ ಜನಿಸಿರುವ, ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯಾಗಿ, ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡನ್ ಅವರು ಆಯ್ಕೆ ಮಾಡಿದ್ದರು. 55 ವಯಸ್ಸಿನ ಕಮಲಾ, ಕ್ಯಾಲಿಫೋರ್ನಿಯಾದಿಂದ ಸೆನೆಟರ್‌ ಆಗಿದ್ದಾರೆ.

ಕಮಲಾ ಅವರು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ನಾಮ ನಿರ್ದೇಶನಗೊಂಡಾಗಿನಿಂದಲೂ ಅವರ ವಿರುದ್ಧ ಟ್ರಂಪ್‌ ವಾಗ್ದಾಳಿ ನಡೆಸುತ್ತಿದ್ದಾರೆ.

‘ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕಾಗಿ ಡೆಮಾಕ್ರಟಿಕ್‌‌ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರು, ನನಗೆ ಕೇಳಿಬಂದ ಮಾಹಿತಿ ಪ್ರಕಾರ ಶ್ವೇತಭವನದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಅರ್ಹತೆಗಳನ್ನು ಹೊಂದಿಲ್ಲ’ ಎಂದು ಇದಕ್ಕೂ ಮೊದಲು ಕಿಡಿಕಾರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT