ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕ್‌ಟಾಕ್ ಮಾರಾಟ: ಸೆಪ್ಟೆಂಬರ್ 15ರ ಗಡುವು ವಿಸ್ತರಿಸಲ್ಲ ಎಂದ ಡೊನಾಲ್ಡ್ ಟ್ರಂಪ್

Last Updated 11 ಸೆಪ್ಟೆಂಬರ್ 2020, 2:26 IST
ಅಕ್ಷರ ಗಾತ್ರ

ವಾಷಿಂಗ್ಟನ್: ಟಿಕ್‌ಟಾಕ್‌ ಅನ್ನು ಮಾರಾಟ ಮಾಡಲು ಅಥವಾ ಸ್ಥಗಿತಗೊಳಿಸಲು ಚೀನಾದ ಬೈಟ್‌ಡ್ಯಾನ್ಸ್ ಕಂಪನಿಗೆ ವಿಧಿಸಲಾಗಿರುವ ಸೆಪ್ಟೆಂಬರ್ 15ರ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಮಿಷಿಗನ್‌ಗೆ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಭಾಗವಹಿಸಲು ತೆರಳುವುದಕ್ಕೂ ಮುನ್ನ ಮಾತನಾಡಿದ ಅವರು, ‘ಭದ್ರತಾ ಕಾರಣಗಳಿಗಾಗಿ ದೇಶದಲ್ಲಿ ಚೀನಾ ಕಂಪನಿಯು ಟಿಕ್‌ಟಾಕ್‌ ಅನ್ನು ಸ್ಥಗಿತಗೊಳಿಸಬೇಕಿದೆ ಅಥವಾ ಮಾರಾಟ ಮಾಡಬೇಕಿದೆ. ಏನಾಗುತ್ತದೆ ನೋಡೋಣ’ ಎಂದು ಹೇಳಿದ್ದಾರೆ.

ಟಿಕ್‌ಟಾಕ್‌ ಅನ್ನು ಮಾರಾಟ ಮಾಡುವಂತೆ ಅಥವಾ ಸ್ಥಗಿತಗೊಳಿಸುವಂತೆ ಬೈಟ್‌ಡ್ಯಾನ್ಸ್ ಕಂಪನಿಗೆ ಆಗಸ್ಟ್‌ನಲ್ಲಿ ಅಮೆರಿಕ ಸರ್ಕಾರ ಸೂಚಿಸಿತ್ತು.

ಟಿಕ್‌ಟಾಕ್‌ ಮತ್ತು ವಿಚಾಟ್‌ನಂತಹ ಆ್ಯಪ್‌ಗಳು ಚೀನಾದ ಭದ್ರತಾ ಸಂಸ್ಥೆಗಳಿಗೆ ನೇರವಾಗಿ ದತ್ತಾಂಶಗಳನ್ನು ಒದಗಿಸಿಕೊಡುತ್ತಿವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಕಳೆದ ತಿಂಗಳು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT