ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ: 6 ಜನರ ಸಾವು

ರಕ್ಷಣಾ ಕಾರ್ಯಾಚರಣೆ ಚುರುಕು
Last Updated 9 ನವೆಂಬರ್ 2022, 15:53 IST
ಅಕ್ಷರ ಗಾತ್ರ

ನವದೆಹಲಿ/ಡೆಹರಾಡೂನ್‌/ಕಠ್ಮಂಡು (ಪಿಟಿಐ):ನೇಪಾಳದಲ್ಲಿ ಬುಧವಾರ ನಸುಕಿನಲ್ಲಿ ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆಯ ಭೂಕಂಪಸಂಭವಿಸಿದ್ದು, ಕನಿಷ್ಠ 6 ಜನರು ಮೃತಪಟ್ಟಿದ್ದಾರೆ.

ನವದೆಹಲಿ ಸಹಿತ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದೆ. ನಗರ ಪ್ರದೇಶ ಮತ್ತು ಹಳ್ಳಿಗಳಲ್ಲೂ ಜನರು ನಿದ್ರೆಯಿಂದ ಎದ್ದು ಮನೆಯಿಂದ ಹೊರಗೆ ಓಡಿ ಬಂದು ಆತಂಕದಲ್ಲಿ ದಿನ ದೂಡಿದ್ದಾರೆ.

ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಾದ ಗಾಜಿಯಾಬಾದ್‌, ಗುರುಗ್ರಾಮ ಮತ್ತು ಲಖನೌ ಹಾಗೂಉತ್ತರಾಖಂಡದ ಹಲವು ಪ್ರದೇಶಗಳಲ್ಲಿಜನರು ಬೆಳಗಾಗುವವರೆಗೂ ಕಣ್ಣಚ್ಚದೇ ಆತಂಕದಲ್ಲೇ ಸಮಯ ಕಳೆದಿದ್ದಾರೆ.

ಹಿಮಾಲಯದ ಕೆಳಗಿನ ಪ್ರದೇಶದ ವ್ಯಾಪ್ತಿಯಲ್ಲಿ ಸಂಭವಿಸಿದ ಭೂಕಂಪದಿಂದ ಪಶ್ಚಿಮ ನೇಪಾಳದ ದೋತಿ ಜಿಲ್ಲೆಯಲ್ಲಿ ಹೆಚ್ಚಿನ ಅನಾಹುತಗಳು ಆಗಿವೆ. ಹಲವು ಮನೆ ಮತ್ತು ಕಟ್ಟಡಗಳು ಕುಸಿದು ಬಿದ್ದಿವೆ. ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಸಿದ ಕಟ್ಟಡಗಳ ಅವಶೇಷಗಡಿ ಸಿಲುಕಿದ್ದವರ ಪೈಕಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆಎಂದು ನೇಪಾಳದ ಗೃಹ ಸಚಿವಾಲಯದ ವಕ್ತಾರ ಫಣೀಂದ್ರ ಪೋಖರೆಲ್‌ ತಿಳಿಸಿದ್ದಾರೆ.

ನೇಪಾಳದ ಗಡಿಗೆ ಹೊಂದಿಕೊಂಡಿರುವ ಉತ್ತರಾಖಂಡದ ಪಿತೋರಗಢದ ಆಗ್ನೇಯದಲ್ಲಿ ಭೂಮಿಯ90 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ.

2015ರಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಎರಡು ಭೀಕರ ಭೂಕಂಪದಲ್ಲಿ ಸುಮಾರು 9 ಸಾವಿರ ಜನರು ಮೃತಪಟ್ಟಿದ್ದರು.

ಇಟಲಿಯಲ್ಲೂ ಕಂಪಿಸಿದ ಭೂಮಿ:

ಮಧ್ಯಮ ಭೂಕಂಪವು ಬುಧವಾರ ನಸುಕಿನಲ್ಲಿ ಇಟಲಿಯ ಈಶಾನ್ಯ ಕರಾವಳಿಯನ್ನೂ ನಡುಗಿಸಿತು.5.7 ರಿಕ್ಟರ್‌ ಮಾಪಕದ ತೀವ್ರತೆಯ ಭೂಕಂಪದಿಂದ ಕಟ್ಟಡಗಳಲ್ಲಿ ಬಿರುಕುಗಳು ಉಂಟಾಗಿವೆ. ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಪರಿಹಾರ ಕಾರ್ಯಾಚರಣೆಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT