ಶನಿವಾರ, ಜನವರಿ 29, 2022
18 °C

ಜರ್ಮನಿ: ಅಂಗೆಲಾ ಮೆರ್ಕೆಲ್‌–16 ವರ್ಷಗಳ ಆಡಳಿತ ಅಂತ್ಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಬರ್ಲಿನ್‌: ಹದಿನಾರು ವರ್ಷಗಳ ಕಾಲ ಜರ್ಮನಿಯ ಛಾನ್ಸಲರ್‌ ಆಗಿ ಅಧಿಕಾರ ನಡೆಸಿದ ಅಂಗೆಲಾ ಮೆರ್ಕೆಲ್‌ ಬುಧವಾರ ಒಲಾಫ್‌ ಶೋಲ್ಜ್‌ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದು, ಪ್ರಭಾವಿ ರಾಷ್ಟ್ರವಾಗಿ ಜರ್ಮನಿಯನ್ನು ಸಜ್ಜುಗೊಳಿಸಿದ್ದಕ್ಕಾಗಿ ಅವರು ಜಾಗತಿಕ ಸಮುದಾಯದ ನೆನಪಲ್ಲಿ ಬಹುಕಾಲ ಉಳಿಯಲಿದ್ದಾರೆ.

ದೇಶ ಎದುರಿಸಿದ್ದ ಹಲವು ಬಿಕ್ಕಟ್ಟುಗಳನ್ನು ಸಮರ್ಥವಾಗಿ ನಿಭಾಯಿಸಿದ ಮತ್ತು ಮಹಿಳೆಯರ ಆದರ್ಶ ನಾಯಕಿಯಾಗಿ ಹೊರಹೊಮ್ಮಿದ ಮೆರ್ಕೆಲ್‌ ಅವರು ವಾಸ್ತವದಲ್ಲಿ ವಿಜ್ಞಾನಿ. ಕಮ್ಯುನಿಸ್ಟ್ ಆಡಳಿತದ ಪೂರ್ವ ಜರ್ಮನಿಯಲ್ಲಿ ಬೆಳೆದ ಅವರು ಜರ್ಮನಿಯ ಏಕೀಕರಣದ ರೂವಾರಿ ಹೆಲ್ಮಟ್‌ ಕೋಲ್‌ ಅವರ ಗರಡಿಯಲ್ಲಿ ಪಳಗಿ ಸಮರ್ಥ ನಾಯಕಿಯಾಗಿ ಬೆಳೆದವರು.

ಸತತ ಐದನೇ ಬಾರಿಗೆ ಛಾನ್ಸಲರ್‌ ಆಗುವ ಕನಸನ್ನು ಅವರು ಹೊಂದಿದ್ದರು. ಆದರೆ ಅವರ ಪಕ್ಷ ಬಹುಮತ ಗಳಿಸುವಲ್ಲಿ ವಿಫಲವಾಗಿದ್ದು, ಇದೀಗ ಶೋಲ್ಜ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ. 

ಈ ಮಧ್ಯೆ, ನೂತನ ಸರ್ಕಾರ ರಚನೆಗಾಗಿ ಸಮಾನ ಮನಸ್ಕ ಪಕ್ಷಗಳಾದ ಸೋಷಿಯಲ್ ಡೆಮಾಕ್ರಟ್ಸ್‌, ದಿ ಎನ್ವಿರಾನ್‌ಮೆಂಟಲ್‌ ಗ್ರೀನ್ಸ್‌ ಮತ್ತು ಫ್ರಿ ಡೆಮಾಕ್ರಟ್ಸ್‌ ಪಕ್ಷಗಳು ‘ಪ್ರಗತಿಪರ ಸಮ್ಮಿಶ್ರ’ ಒಕ್ಕೂಟ ರಚಿಸಿಕೊಂಡಿದ್ದು, 177 ಪುಟಗಳ ಸಮ್ಮಿಶ್ರ ಒಪ್ಪಂದಕ್ಕೆ ಸಹಿ ಹಾಕಿವೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು