ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕಿಪಾಕ್ಸ್‌ಗೆ ಸಿಡುಬು ಲಸಿಕೆ: ಇಯು ಔಷಧ ಸಂಸ್ಥೆ ಶಿಫಾರಸು

Last Updated 22 ಜುಲೈ 2022, 15:22 IST
ಅಕ್ಷರ ಗಾತ್ರ

ದಿ ಹೇಗ್‌: ಮಂಕಿ ಪಾಕ್ಸ್‌ ವೈರಾಣು ಸೋಂಕಿಗೆ ಸ್ಮಾಲ್‌ಪಾಕ್ಸ್‌ (ಸಿಡುಬು) ಲಸಿಕೆ ಬಳಕೆಗೆ ಅನುಮೋದನೆ ನೀಡಲುಯುರೋಪ್‌ ಒಕ್ಕೂಟದ ಔಷಧ ಉತ್ಪನ್ನಗಳ ಮೇಲಿನ ನಿಗಾ ಸಂಸ್ಥೆಯು ಶುಕ್ರವಾರ ಶಿಫಾರಸು ಮಾಡಿದೆ.‌

ಮಂಕಿಪಾಕ್ಸ್ ವೈರಸ್ ಮತ್ತು ಸಿಡುಬು ವೈರಸ್‌ಗಳ ನಡುವಿನ ಸಾಮ್ಯತೆಯ ಕಾರಣದಿಂದ ಇಮ್ವ್ಯಾನೆಕ್ಸ್‌ ಅನ್ನು ಮಂಕಿಪಾಕ್ಸ್‌ಗೆ ಸಂಭಾವ್ಯ ಲಸಿಕೆ ಎಂದೇ ಪರಿಗಣಿಸಲಾಗಿದೆ.ಇಮ್ವ್ಯಾನೆಕ್ಸ್‌ ಲಸಿಕೆಯನ್ನುಡ್ಯಾನಿಷ್ ಔಷಧ ತಯಾರಕ ಬವೇರಿಯನ್ ನಾರ್ಡಿಕ್ ಅಭಿವೃದ್ಧಿಪಡಿಸಿತ್ತು. 2013ರಿಂದ ಯುರೋಪಿನಲ್ಲಿ ಸಿಡುಬು ತಡೆಗಟ್ಟಲು ಈ ಲಸಿಕೆ ಬಳಸಲಾಗುತ್ತಿದೆ.

ಮಂಕಿಪಾಕ್ಸ್ ಕಾಯಿಲೆಯಿಂದ ವಯಸ್ಕರನ್ನು ರಕ್ಷಿಸಲು ಸಿಡುಬು ಲಸಿಕೆ ಇಮ್ವ್ಯಾನೆಕ್ಸ್‌ ನೀಡುವಂತೆ ಯುರೋಪಿಯನ್‌ ಮೆಡಿಸಿನ್‌ ಏಜೆನ್ಸಿಯ (ಯುಎಂಎ) ಹ್ಯೂಮನ್‌ ಮೆಡಿಸಿನ್ಸ್‌ ಕಮಿಟಿ (ಸಿಎಚ್‌ಎಂಪಿ)ಶಿಫಾರಸು ಮಾಡಿದೆ.

ವಿಶ್ವದ 71 ದೇಶಗಳಲ್ಲಿ 15,400ಮಂಕಿಪಾಕ್ಸ್‌ ಪ್ರಕರಣಗಳು ಈವರೆಗೆ ವರದಿಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಘೋಷಿಸುವ ಸಾಧ್ಯತೆ ಇದೆಎಂದು ಯುಎಂಎ ಹೇಳಿದೆ.

‌ಮಂಕಿಪಾಕ್ಸ್ ಲಕ್ಷಣಗಳು: ಜ್ವರ, ತಲೆನೋವು, ಸ್ನಾಯು ಸೆಳೆತ, ಬೆನ್ನು ನೋವು ಇವು ಆರಂಭಿಕ ಲಕ್ಷಣಗಳು. ನಂತರ ಮುಖ, ಅಂಗೈ, ಪಾದಗಳ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT