ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್‌ ಒಳ್ಳೆಯದನ್ನೇ ಮಾಡಿದೆ ಎಂದಿದ್ದ ಟ್ರಂಪ್‌’

ಉಪಾಧ್ಯಕ್ಷ ಮೆಕ್‌ಪೆನ್ಸ್‌ ಸಲಹೆಗಾರ್ತಿ ಒಲಿವಿಯಾ ಟ್ರಾಯೆ ಹೇಳಿಕೆ
Last Updated 18 ಸೆಪ್ಟೆಂಬರ್ 2020, 8:03 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿರುದ್ಧ ಕಿಡಿಕಾರಿರುವ ಉಪಾಧ್ಯಕ್ಷ ಮೈಕ್ ಪೆನ್ಸ್‌ ಅವರ ಮಾಜಿ ಸಲಹೆಗಾರ್ತಿ ಒಲಿವಿಯಾ ಟ್ರಾಯೆ ಅವರು 'ಟ್ರಂಪ್ ಅವರನ್ನು ಎರಡನೇ ಬಾರಿಗೆ ಆಯ್ಕೆ ಮಾಡಬೇಡಿ’ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಕೊರೊನಾ ವೈರಸ್‌ ನಿಯಂತ್ರಣ ಕುರಿತಾದ ಕಾರ್ಯಪಡೆಯಲ್ಲೂ ಸೇವೆ ಸಲ್ಲಿಸಿರುವ ಒಲಿವಿಯಾ, ಸಭೆಯೊಂದರಲ್ಲಿ ಟ್ರಂಪ್ ಆಡಿದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.

'ಟ್ರಂಪ್ ಒಮ್ಮೆ ಸಭೆಯಲ್ಲಿ, ಈ ಕೊರೊನಾ ವೈರಸ್ ಒಂದು ರೀತಿ ಒಳ್ಳೆಯದೇ ಮಾಡಿದೆ. ಇದರಿಂದ ಅಸಹ್ಯಕರ ವ್ಯಕ್ತಿಗಳ ಕೈ ಕುಲುಕುವುದು ತಪ್ಪಿದೆ ಎಂದು ಹೇಳಿದ್ದರು’ ಎಂದು ಒಲಿವಿಯಾ ಉಲ್ಲೇಖಿಸಿದ್ದಾರೆ.

’ಟ್ರಂಪ್ ಜತೆ ಕೆಲಸ ಮಾಡುವುದು ಭಯಾನಕವಾಗಿತ್ತು. ಆ ವ್ಯಕ್ತಿ ಕೊರೊನಾ ಸೋಂಕಿನಿಂದ ದೇಶವನ್ನು ರಕ್ಷಿಸಲು ತೋರುವ ಕಾಳಜಿಗಿಂತ, ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾಗಬೇಕು ಎಂಬುದರ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಸತ್ಯ ಏನೆಂದರೆ ಟ್ರಂಪ್ ತನ್ನನ್ನು ಬಿಟ್ಟು, ಬೇರೆ ಯಾರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ’ ಎಂದೂ ಒಲಿವಿಯಾ ಹೇಳಿದ್ದಾರೆ.

ಗುರುವಾರ ಡೊನಾಲ್ಡ್‌ ಟ್ರಂಪ್ ಅವರು ಒಲಿವಿಯಾ ಯಾರು ಎನ್ನುವುದೇ ಗೊತ್ತಿಲ್ಲ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT