ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯತ್ವ ಏರಿಕೆ: ಭಾರತ ಪ್ರತಿಪಾದನೆ

Last Updated 10 ಮಾರ್ಚ್ 2023, 11:04 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಮತ್ತು ಶಾಶ್ವತಯೇತರ ವರ್ಗದಲ್ಲಿ ಸದಸ್ಯ ರಾಷ್ಟ್ರಗಳ ಸಂಖ್ಯೆಯನ್ನು ಹೆಚ್ಚಿಸುವುದರ ಅಗತ್ಯವಿದೆ. ಇದರಿಂದ ಅಭಿವೃದ್ಧಿ ರಾಷ್ಟ್ರಗಳು, ಪ್ರಾತಿನಿಧ್ಯವಿಲ್ಲದ ವಲಯಗಳ ದೇಶಗಳ ಧ್ವನಿಗೂ ವಿಶ್ವದ ಪ್ರಮುಖ ಸಂಸ್ಥೆಯಲ್ಲಿ ಮನ್ನಣೆ ಸಿಗಲಿದೆ ಎಂದು ಭಾರತ ಪ್ರತಿಪಾದಿಸಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾದ ರಾಯಭಾರಿ ರುಚಿರಾ ಕಂಬೋಜ್ ಅವರು, ಸಮಕಾಲೀನ ರಾಜಕೀಯ ವಸ್ತುಸ್ಥಿತಿಗೆ ಪೂರಕವಾಗಿ ವಿಶ್ವಸಂಸ್ಥೆಯನ್ನು ನಿರ್ಣಾಯಕವಾಗಿಸುವುದು ಇದರಿಂದ ಸಾಧ್ಯ ಎಂದಿದ್ದಾರೆ.

ಅಂತರ ಸರ್ಕಾರಗಳ ಮಾತುಕತೆ ವಿಷಯವನ್ನು ಕುರಿತಂತೆ ವಿಶ್ವಸಂಸ್ಥೆಯ ಅಧಿವೇಶನದ ಅನೌಪಚಾರಿಕ ಸಭೆಯಲ್ಲಿ ಮಾತನಾಡುತ್ತಿದ್ದ ಕಂಬೋಜ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವದ ಭೌಗೋಳಿಕ ಮತ್ತು ಅಭಿವೃದ್ಧಿಗೆ ಪೂರಕವಾಗಿ ವಿಶ್ವಸಂಸ್ಥೆಯು ವಿಸ್ತರಣೆಯಾಗಬೇಕು. ಪ್ರಸ್ತುತ ಅಭಿವೃದ್ಧಿ ರಾಷ್ಟ್ರಗಳಾದ ಆಫ್ರಿಕಾ, ಲ್ಯಾಟಿನ್ ಅಮೆರಿಕ, ಏಷ್ಯಾದ ಬಹುರಾಷ್ಟ್ರಗಳಿಗೂ ಸೂಕ್ತ ಪ್ರಾತಿನಿಧ್ಯ ಸಿಗಬೇಕಿದೆ. ಈ ಉದ್ದೇಶ ಸಾಧನೆಗೆ ಶಾಶ್ವತ, ಶಾಶ್ವತಯೇತರ ಎರಡೂ ವರ್ಗಗಳಲ್ಲಿ ಸದಸ್ಯತ್ವ ಹೆಚ್ಚಬೇಕು ಎಂದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಹೆಚ್ಚು ಉತ್ತರಾದಾಯಿತ್ವ ಮತ್ತು ವಿಶ್ವಾಸಾರ್ಹ ಮಾಡಲು ರಾಷ್ಟ್ರಗಳು ನಿಜವಾಇ ಬಯಸಿದ್ದೇ ಆದಲ್ಲಿ, ಕಾಲಮಿತಿಯಲ್ಲಿ ಸುಧಾರಣೆ ಕ್ರಮಗಳಿಗೂ ಮುಂದಾಗಬೇಕು ಎಂದು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT