ಇಸ್ತಾಂಬುಲ್ (ಎಪಿ): ಇಸ್ತಾಂಬುಲ್‌ನ ಜನಪ್ರಿಯ ಪಾದಚಾರಿ ಮಾರ್ಗವಾದ ಇಸ್ತಿಕಾಲ್ ಅವೆನ್ಯೂದಲ್ಲಿ ಭಾನುವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ 4 ಜನ ಮೃತರಾಗಿದ್ದು, 38 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ತಾಂಬುಲ್ ಗವರ್ನರ್ ಅಲಿ ಯರ್ಲಿಕಾಯಾ ಟ್ವೀಟ್ ಮಾಡಿದ್ದಾರೆ.
ಇಸ್ತಿಕಾಲ್ ಅವೆನ್ಯೂದಲ್ಲಿ ರೆಸ್ಟೋರೆಂಟ್, ಅಂಗಡಿಗಳಿದೆ. ಇದು ಹೆಚ್ಚಿನ ಪ್ರವಾಸಿಗರು, ಸ್ಥಳೀಯರಿಂದ ಕಿಕ್ಕಿರಿದ ರಸ್ತೆಯಾಗಿದೆ. ಭಾನುವಾರ ಸಂಜೆ ಸುಮಾರು 4.30ಕ್ಕೆ ಸ್ಫೋಟ ನಡೆದಿದ್ದು, ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ.
ಟರ್ಕಿಯ ಮಾಧ್ಯಮದಲ್ಲಿ ಸ್ಫೋಟದ ವರದಿ ಪ್ರಸಾರದ ಮೇಲೆ ತಾತ್ಕಾಲಿಕ ನಿಷೇಧಿ ವಿಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ಫೋಟದ ನಂತರದ ಹಾಗೂ ರಕ್ಷಣಾ ಕಾರ್ಯದ ವಿಡಿಯೊ ತುಣುಕುಗಳು ಹರಿದಾಡಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.