ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ, ಸುಳ್ಳು ಸುದ್ದಿಗಳನ್ನು ತಡೆಯದಿರುವ ಬಗ್ಗೆ ಫೇಸ್‌ಬುಕ್‌ಗೆ ಗೊತ್ತಿದೆ: ವರದಿ

Last Updated 26 ಅಕ್ಟೋಬರ್ 2021, 6:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ದ್ವೇಷ, ಸುಳ್ಳು ಸುದ್ದಿಗಳ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಅಗತ್ಯ ಪ್ರಮಾಣದ ಉದ್ಯೋಗಿಗಳನ್ನು ನೇಮಿಸಿಕೊಂಡಿಲ್ಲ ಎಂಬುದು ಫೇಸ್‌ಬುಕ್‌ಗೆ ಗೊತ್ತಿತ್ತು ಎಂಬುದು ದಾಖಲೆಗಳ ಮೂಲಕ ಬಹಿರಂಗವಾಗಿದೆ.

ಜಾಗತಿಕವಾಗಿ ಪ್ರಭಾವ ಬೀರುತ್ತಿರುವ ಫೇಸ್‌ಬುಕ್‌ನಲ್ಲಿ ದ್ವೇಷ, ಸುಳ್ಳು ಸುದ್ದಿಗಳ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಹಾಗೂ ಅದರಿಂದ ಸಮಾಜದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಮಾಜಿ ಉದ್ಯೋಗಿಗಳು ಎಚ್ಚರಿಕೆ ನೀಡಿರುವುದು ದಾಖಲೆಗಳಲ್ಲಿ ಕಂಡು ಬಂದಿದೆ.

ರಾಯಿಟರ್ಸ್‌ ಸುದ್ದಿ ಸಂಸ್ಥೆಯು ಐವರು ಫೇಸ್‌ಬುಕ್‌ ಮಾಜಿ ಉದ್ಯೋಗಿಗಳ ಜೊತೆ ಸಂದರ್ಶನ ನಡೆಸಿತ್ತು. ಈ ಸಂದರ್ಭ ಅವರು ತೋರಿಸಿದ ದಾಖಲೆಗಳನ್ನು ವೀಕ್ಷಿಸಿರುವ ರಾಯಿಟರ್ಸ್‌, ದ್ವೇಷ ಭಾಷಣ ಹರಡುವಿಕೆ ಮತ್ತು ಹಿಂಸೆಗೆ ಕಾರಣವಾಗುವ ಕಂಟೆಂಟ್‌ ತಡೆಯುವುದಕ್ಕೆ ಜಾಗತಿಕವಾಗಿ ಅಗತ್ಯ ಪ್ರಮಾಣದ ಉದ್ಯೋಗಿಗಳನ್ನು ನೇಮಿಕೊಂಡಿಲ್ಲದಿರುವ ಬಗ್ಗೆ ಫೇಸ್‌ಬುಕ್‌ಗೆ ಮೊದಲೇ ಅರಿವಿತ್ತು ಎಂದು ವರದಿ ಮಾಡಿದೆ.

ಫೇಸ್‌ಬುಕ್‌ 198 ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ. ವಿಶ್ವದಾದ್ಯಂತ 160ಕ್ಕೂ ಹೆಚ್ಚು ಭಾಷೆ ಒಳಗೊಂಡಂತೆ 280 ಕೋಟಿಗೂ ಹೆಚ್ಚು ಮಂದಿ ಬಳಕೆ ಮಾಡುತ್ತಿದ್ದಾರೆ. ಆದರೆ ಅದಕ್ಕೆ ತಕ್ಕುದಾದ ರಕ್ಷಣಾ ಕ್ರಮಗಳನ್ನು ಕೈಗೊಂಡಿಲ್ಲದಿರುವುದರ ಬಗ್ಗೆ ಮಾಜಿ ಉದ್ಯೋಗಿಗಳು ಆರೋಪಗಳ ಸುರಿಮಳೆಗರೆದಿದ್ದಾರೆ.

ಇತ್ತೀಚೆಗೆ ಫೇಸ್‌ಬುಕ್‌ನ ಸಹ ಸಂಸ್ಥೆಯಾಗಿರುವ ಇನ್‌ಸ್ಟಾಗ್ರಾಂ ಮಕ್ಕಳ ಮಾನಸಿಕ ಬೆಳವಣಿಗೆ ಮೇಲೆ ತೀವ್ರ ತರದ ಹಾನಿಯನ್ನು ಉಂಟು ಮಾಡುತ್ತಿದೆ ಎಂಬುದು ಗೊತ್ತಿದ್ದೂ, ಅಂತಹ ಕಂಟೆಂಟ್‌ಗಳನ್ನು ತಡೆಯುವಲ್ಲಿ ಯಾವ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪಗಳು ವ್ಯಕ್ತವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT