ಬುಧವಾರ, ಅಕ್ಟೋಬರ್ 28, 2020
24 °C

ಅಮೆರಿಕದಲ್ಲಿ ಮತದಾನ ಉತ್ತೇಜನಕ್ಕೆ ಫೇಸ್‌ಬುಕ್ ಅಭಿಯಾನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನವನ್ನು ಉತ್ತೇಜಿಸಲು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಹೊಸ ಅಭಿಯಾನ ಆರಂಭಿಸಿದೆ.

ಮತ ಚಲಾಯಿಸುವ ಕುರಿತು ಮಾಹಿತಿ ನೀಡಲು ವರ್ಚುವಲ್ ಮತಗಟ್ಟೆ ಮಾಹಿತಿ ಕೇಂದ್ರ ಆರಂಭಿಸಿದೆ. ಮಾತ್ರವಲ್ಲ, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಅಪ್ಲಿಕೇಷನ್‌ ಮೂಲಕ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಲು ನಾಗರಿಕರನ್ನು ಉತ್ತೇಜಿಸುತ್ತಿದೆ.

ಮತದಾರರು ಹೇಗೆ ನೋಂದಣಿ ಮಾಡಿಕೊಳ್ಳಬೇಕು, ಹೇಗೆ ಅಂಚೆ (ಮೇಲ್‌) ಮೂಲಕ ಮತದಾನ ಮಾಡಬೇಕು ಎಂಬ ಬಗ್ಗೆ ಈ ವರ್ಚುವಲ್ ಮಾಹಿತಿ ಕೇಂದ್ರದಲ್ಲಿ ಸಮಗ್ರ ಮಾಹಿತಿ ದೊರೆಯಲಿದೆ.

ಚುನಾವಣೆ ದಿನ ಸ್ವಯಂ ಸೇವಕರು ಮತಗಟ್ಟೆ ಕೇಂದ್ರಗಳಲ್ಲಿ ಹೇಗೆ ಕೆಲಸ ಮಾಡಬೇಕು ಎಂಬ ಮಾಹಿತಿ ಇದೆ.

ಫೇಸ್‌ಬುಕ್‌ನ ಈ ಹೊಸ ಅಭಿಯಾನ ಅಮೆರಿಕದ ಪ್ರಮುಖ ಸುದ್ದಿವಾಹಿನಿಗಳು ಮತ್ತು ರೇಡಿಯೊ ಕೇಂದ್ರಗಳು ಹಾಗೂ ಆನ್‌ಲೈನ್ ಜಾಲತಾಣಗಳಲ್ಲೂ ಪ್ರಸಾರವಾಗುತ್ತಿದೆ. ಫೇಸ್‌ಬುಕ್‌ ಈ ಪ್ರಚಾರಾಂದೋಲನದ ಮಾಹಿತಿಯನ್ನು ಶನಿವಾರದಿಂದ ಇನ್‌ಸ್ಟಾಗ್ರಾಂ ಮತ್ತು ಮೆಸೇಂಜರ್ ಮೂಲಕ ಹಂಚಿಕೊಳ್ಳುತ್ತಿದೆ.

ಸಿಲಿಕಾನ್ ವ್ಯಾಲಿಯ ದೈತ್ಯ ಎಂದೇ ಕರೆಯುವ ಫೇಸ್‌ಬುಕ್‌ ಮಂಗಳವಾರ ಇಡೀ ದಿನ ‘ವೋಟ್‌ – ಎ–ಥಾನ್‘ ಎಂಬ ಕಾರ್ಯಕ್ರಮವನ್ನು ರೂಪಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ಮತ್ತು ಜನಪ್ರಿಯ ವ್ಯಕ್ತಿಗಳು ಮತದಾನಕ್ಕೆ ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಲಿದ್ದಾರೆ. ಈ ಪ್ರಚಾರೋಂದಲನದಿಂದಾಗಿ ಅಂದಾಜು 25 ಲಕ್ಷ ನಾಗರಿಕರು ಮತದಾನಕ್ಕಾಗಿ ಹೆಸರು ನೋಂದಾಯಿಸಲು ನೆರವು ನೀಡಿರುವುದಾಗಿ ಎಂದು ಫೇಸ್‌ಬುಕ್ ಹೇಳಿಕೊಂಡಿದೆ. 

‘ನಾವು ಈ ವರ್ಷ 40 ಲಕ್ಷ ಜನರನ್ನು ಮತದಾನಕ್ಕೆ ನೋಂದಣಿ ಮಾಡಿಸಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ಇನ್ನಷ್ಟು ಹೆಚ್ಚು ಕೆಲಸ ಮಾಡುತ್ತೇವೆ‘ ಎಂದು ಫೇಸ್‌ಬುಕ್ ಪ್ರಕಟಣೆಯಲ್ಲಿ ತಿಳಿಸಿದೆ. ಇಲ್ಲಿವರೆಗೆ 3.9 ಕೋಟಿ ಜನರು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಮೂಲಕ ಮತದಾನ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು