ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅತ್ಯಂತ ಸಂತೋಷ ಭರಿತ ರಾಷ್ಟ್ರ ಫಿನ್ಲೆಂಡ್‌; ಭಾರತಕ್ಕೆ 136ನೇ ಸ್ಥಾನ

Last Updated 18 ಮಾರ್ಚ್ 2022, 13:49 IST
ಅಕ್ಷರ ಗಾತ್ರ

ಹೆಲ್ಸಿಂಕಿ (ಫಿನ್ಲೆಂಡ್‌): ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷ ಸೂಚ್ಯಂಕ ವರದಿಯಲ್ಲಿ ಫಿನ್ಲೆಂಡ್‌ ಸತತವಾಗಿ ಐದನೇ ಬಾರಿಯೂ ಮೊದಲನೇ ಸ್ಥಾನದಲ್ಲಿದೆ. ಅಫ್ಗಾನಿಸ್ತಾನ ಅತೃಪ್ತಿಕರ ರಾಷ್ಟ್ರವೆಂದು ದಾಖಲಾಗಿದೆ.

ಯುರೋಪಿಯನ್‌ ರಾಷ್ಟ್ರಗಳು ಸಂತೋಷ ಸೂಚ್ಯಂಕದಲ್ಲಿ ಅಗ್ರ ಸ್ಥಾನಗಳಲ್ಲಿ ಮುಂದುವರಿದಿವೆ. ಸರ್ಬಿಯಾ, ಬಲ್ಗೇರಿಯಾ ಹಾಗೂ ರೊಮೇನಿಯಾ ರಾಷ್ಟ್ರಗಳು ಸ್ಥಾನದಲ್ಲಿ ಮೇಲೇರಿವೆ. ಲೆಬನಾನ್‌, ವೆನಿಜುವೆಲಾ ಹಾಗೂ ಅಫ್ಗಾನಿಸ್ತಾನದಲ್ಲಿ ಸಂತೋಷ ಕ್ಷೀಣಿಸಿರುವುದು ಈ ಸೂಚ್ಯಂಕ ವರದಿಯಿಂದ ತಿಳಿದು ಬಂದಿದೆ.

146 ರಾಷ್ಟ್ರಗಳ ವಿಶ್ವ ಸಂತೋಷ ಸೂಚ್ಯಂಕದಲ್ಲಿ ಲೆಬನಾನ್‌ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಆ ರಾಷ್ಟ್ರವು ಆರ್ಥಿಕ ಹಿಂಜರಿತಕ್ಕೆ ಒಳಗಾಗಿದೆ. ಭಾರತ ಈ ವರ್ಷವೂ 136ನೇ ಸ್ಥಾನದಲ್ಲಿದೆ.

ಯುದ್ಧಗಳಿಂದ ಜರ್ಜರಿತವಾಗಿರುವ ಅಫ್ಗಾನಿಸ್ತಾನವು ತಾಲಿಬಾನ್‌ ಆಡಳಿತಕ್ಕೆ ಒಳಪಟ್ಟ ನಂತರದಲ್ಲಿ ಮಾನವೀಯ ಪರಿಸ್ಥಿತಿ ಹದಗೆಟ್ಟಿದೆ. ಸಂತೋಷ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿಯೇ ಇದೆ. ಯುನಿಸೆಫ್‌ ಪ್ರಕಾರ, ಈ ಬಾರಿಯ ಚಳಿಗಾಲದ ಅವಧಿಯಲ್ಲಿ ನೆರವು ನೀಡದಿದ್ದರೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹತ್ತು ಲಕ್ಷ ಮಕ್ಕಳು ಹಸಿವಿನಿಂದ ಸಾಯುವ ಸಾಧ್ಯತೆ ಇರುವುದಾಗಿ ಅಂದಾಜಿಸಿದೆ.

ಫಿನ್ಲೆಂಡ್‌ ನಂತರದ ಸ್ಥಾನದಲ್ಲಿ ಡೆನ್ಮಾರ್ಕ್ ಇದ್ದು, ನಂತರದಲ್ಲಿ ಐಸ್‌ಲ್ಯಾಂಡ್‌, ಸ್ವಿಟ್ಜರ್ಲೆಂಡ್ ಮತ್ತು ನೆದರ್ಲೆಂಡ್‌ ಸ್ಥಾನ ಪಡೆದಿವೆ. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಆರಂಭಿಸುವುದಕ್ಕೂ ಮುನ್ನ ಸಂತೋಷ ಸೂಚ್ಯಂಕದ ದತ್ತಾಂಶ ಕ್ರೋಢೀಕರಿಸಲಾಗಿದೆ.

ಅಮೆರಿಕ 16ನೇ ಸ್ಥಾನಕ್ಕೇರಿದ್ದು, 17ನೇ ಸ್ಥಾನದಲ್ಲಿ ಬ್ರಿಟನ್‌ ಹಾಗೂ ಫ್ರಾನ್ಸ್‌ 20ನೇ ಸ್ಥಾನದಲ್ಲಿದೆ.

ಆದಾಯ, ಭ್ರಷ್ಟಾಚಾರದ ಮಟ್ಟ, ವೈಯಕ್ತಿಕ ಸ್ವಾತಂತ್ರ್ಯ, ಆರೋಗ್ಯಕರ ಜೀವನ, ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ಸಾಮಾಜಿಕ ಬೆಂಬಲ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಕೋವಿಡ್‌ ಸಂದರ್ಭದಲ್ಲಿ ಜನರ ಬದುಕಿನ ಮೇಲೆ ಆಗಿರುವ ಪರಿಣಾಮ, ಮಾನಸಿಕ ಸ್ಥಿತಿಯನ್ನು ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT