ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ರ ಅಕ್ಟೋಬರ್‌ನಲ್ಲೇ ಚೀನಾದಲ್ಲಿ ಮೊದಲ ಕೋವಿಡ್ ಪ್ರಕರಣ: ಅಧ್ಯಯನ

Last Updated 25 ಜೂನ್ 2021, 2:30 IST
ಅಕ್ಷರ ಗಾತ್ರ

ಶಾಂಘೈ: ಕೊರೊನಾ ವೈರಸ್ ಸೋಂಕಿನ ಮೊದಲ ಪ್ರಕರಣ ಚೀನಾದಲ್ಲಿ 2019ರ ಅಕ್ಟೋಬರ್‌ನಲ್ಲೇ ದಾಖಲಾಗಿದ್ದು, ಆಗಿನಿಂದಲೇ ಹರಡುವಿಕೆ ಆರಂಭವಾಗಿರಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ.

ಚೀನಾದಲ್ಲಿ 2019ರ ಡಿಸೆಂಬರ್‌ನಲ್ಲಿ ಕೊರೊನಾ ವೈರಸ್ ಮೊದಲ ಪ್ರಕರಣ ಪತ್ತೆಯಾಗಿತ್ತು.

2019ರ ಅಕ್ಟೋಬರ್‌ ಆರಂಭದಿಂದ ನವೆಂಬರ್ ಮಧ್ಯಭಾಗದಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗಿರಬಹುದು ಎಂದು ಬ್ರಿಟನ್‌ನ ‘ಕೆಂಟ್ ವಿಶ್ವವಿದ್ಯಾಲಯ’ದ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಈ ಸಂಶೋಧನಾ ವರದಿಯು ‘ಪಿಎಲ್‌ಒಎಸ್ ಪ್ಯಾಥಜನ್ಸ್ ಜರ್ನಲ್‌’ನಲ್ಲಿ ಪ್ರಕಟವಾಗಿದೆ.

ಕೋವಿಡ್ ಸೋಂಕು 2019ರ ನವೆಂಬರ್‌ನಿಂದ ಸಾಂಕ್ರಾಮಿಕವಾಗಿ ಹರಡಲು ಆರಂಭವಾಗಿರಬಹುದು. 2020ರ ಜನವರಿ ವೇಳೆಗೆ ಅದು ಜಾಗತಿಕವಾಗಿ ಹರಡಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

2019ರ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಮೊದಲು ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ವುಹಾನ್ ಮಾರುಕಟ್ಟೆಯಿಂದ ಹರಡಿರಬಹುದು ಎನ್ನಲಾಗಿತ್ತು. ಆದಾಗ್ಯೂ, ಕೆಲವು ಪ್ರಕರಣಗಳಿಗೆ ವುಹಾನ್ ಮಾರುಕಟ್ಟೆಯೊಂದಿಗೆ ಸಂಬಂಧವಿಲ್ಲ, ಅದಕ್ಕೂ ಮೊದಲೇ ಹರಡಿರುವ ಸಾಧ್ಯತೆ ಇದೆ ಎಂದೂ ಹೇಳಲಾಗಿತ್ತು.

ವುಹಾನ್‌ನಲ್ಲಿ ಸಾಂಕ್ರಾಮಿಕವು ಹರಡುವುದಕ್ಕೂ ಮೊದಲೇ ಹಲವು ಮಂದಿಗೆ ಸೋಂಕು ತಗುಲಿದ್ದಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ನಡೆಸಿದ್ದ ಜಂಟಿ ಅಧ್ಯಯನದಲ್ಲಿಯೂ ಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT