ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈನೋಸರ್‌ಗಳ ಕೊನೆ ಸಂತತಿಯ 11 ಕೋಟಿ ವರ್ಷ ಹಿಂದಿನ ಹೆಜ್ಜೆಗುರುತು ಪತ್ತೆ

Last Updated 20 ಜೂನ್ 2021, 3:45 IST
ಅಕ್ಷರ ಗಾತ್ರ

ಲಂಡನ್‌: 11 ಕೋಟಿ ವರ್ಷಗಳ ಹಿಂದೆ ಬ್ರಿಟನ್‌ನಲ್ಲಿ ನಡೆದಾಡಿದ್ದವು ಎನ್ನಲಾದ ಕನಿಷ್ಠ ಆರು ವಿಭಿನ್ನ ಜಾತಿಯ ಡೈನೋಸಾರ್‌ಗಳ ಕೊನೆ ಸಂತತಿಯ ಹೆಜ್ಜೆಗುರುತುಗಳು ಕೆಂಟ್‌ ಎಂಬಲ್ಲಿ ಪತ್ತೆಯಾಗಿವೆ ಎಂದು ಸಂಶೋಧಕರ ಹೊಸ ವರದಿಯಲ್ಲಿ ಹೇಳಲಾಗಿದೆ.

‘ಹೇಸ್ಟಿಂಗ್ಸ್ ಮ್ಯೂಸಿಯಂ ಆ್ಯಂಡ್‌ ಆರ್ಟ್ ಗ್ಯಾಲರಿ‘ಯ ಕ್ಯುರೇಟರ್ ಮತ್ತು ಪೋರ್ಟ್ಸ್‌ಮೌತ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಡೈನೋಸಾರ್ ಹೆಜ್ಜೆಗುರುತುಗಳನ್ನು ಕಂಡುಹಿಡಿದಿದ್ದಾರೆ.

ಕೆಂಟ್‌ನ ಫೋಕ್‌ಸ್ಟೋನ್‌ ನಾಲೆಯ ತೀರ ಪ್ರದೇಶದ ಕಡಿದಾದ ಬಂಡೆಗಳ ಬಳಿ ಹೆಜ್ಜೆಗುರುತುಗಳು ಪತ್ತೆಯಾಗಿವೆ. ಈ ಭಾಗದಲ್ಲಿ ಪಳೆಯುಳಿಕೆಗಳು ಆಗಾಗ್ಗೆ ಪತ್ತೆಯಾಗುತ್ತಿರುತ್ತವೆ.

‘ಫೋಕ್‌ಸ್ಟೋನ್‌ ರಚನೆ‘ ಎಂದು ಕರೆಯಲ್ಪಡುವ ಸ್ತರಗಳಲ್ಲಿ ಡೈನೋಸಾರ್ ಹೆಜ್ಜೆಗುರುತುಗಳು ಕಂಡುಬಂದಿರುವುದು ಇದೇ ಮೊದಲು. ಇದು ಅಸಾಧಾರಣವಾದ ಸಂಶೋಧನೆ. ಏಕೆಂದರೆ ಡೈನೋಸಾರ್‌ಗಳು ಅಳಿವಿಗೆ ಜಾರುವುದಕ್ಕೂ ಮೊದಲು ಈ ದೇಶದಲ್ಲಿ ಕೊನೆಯದಾಗಿ ಸಂಚರಿಸಿವೆ‘ ಎಂದು ಪೋರ್ಟ್ಸ್‌ಮೌತ್ ವಿಶ್ವವಿದ್ಯಾಲಯದ ಪಾಲಿಯೊಬಯಾಲಜಿ ಪ್ರಾಧ್ಯಾಪಕ ಡೇವಿಡ್ ಮಾರ್ಟಿಲ್ ಹೇಳಿದ್ದಾರೆ.

ಸಂಶೋಧನೆ ವರದಿಯನ್ನು ‘ಪ್ರೊಸೀಡಿಂಗ್ಸ್ ಆಫ್ ದಿ ಜಿಯಾಲಜಿಸ್ಟ್ಸ್ಅಸೋಸಿಯೇಷನ್’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ, ಕೆಲವು ಹೆಜ್ಜೆಗುರುತುಗಳನ್ನು ಫೋಕ್‌ಸ್ಟೋನ್‌ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT