ಬುಧವಾರ, ಜುಲೈ 6, 2022
23 °C

ಆಕ್ರಮಿತ ನಗರಗಳಲ್ಲಿ ರಷ್ಯಾ ಸೈನಿಕರು ಅತ್ಯಾಚಾರ ಎಸುಗುತ್ತಿದ್ದಾರೆ: ಉಕ್ರೇನ್ ಸಚಿವ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಲಂಡನ್: ರಷ್ಯಾದ ಯೋಧರು ಉಕ್ರೇನ್‌ನ ಆಕ್ರಮಿತ ನಗರಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಆರೋಪಿಸಿದ್ದಾರೆ.

ಆದರೆ, ಈ ಕುರಿತು ಕುಲೆಬಾ ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ತಿಳಿಸಿದೆ.

ಲಂಡನ್‌ನ ಚಾಥಮ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕುಲೆಬಾ ಅವರು, ರಷ್ಯಾದ ಸೈನಿಕರು ಉಕ್ರೇನ್‌ ನಗರಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಹಲವು ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ ಅಂತರರಾಷ್ಟ್ರೀಯ ಕಾನೂನಿನ ದಕ್ಷತೆಯ ಬಗ್ಗೆ ಮಾತನಾಡುವುದು ಕಷ್ಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯುದ್ಧ ನಡೆಯಲು ಕಾರಣರಾದ ಎಲ್ಲರನ್ನೂ ನ್ಯಾಯಾಂಗದ ಎದುರು ತರಲಾಗುವುದು ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ನಾಗರಿಕರಿಗೆ ಇರುವ ಏಕೈಕ ಸಾಧನ ಇದಾಗಿದೆ (ಅಂತರರಾಷ್ಟ್ರೀಯ ಕಾನೂನು) ಎಂದೂ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು