ಸೋಮವಾರ, ಜನವರಿ 25, 2021
27 °C

‘ಫಾರಿನ್‌ ಪಾಲಿಸಿ‘ಗೆ ರವಿ ಅಗರ್‌ವಾಲ್ ಮುಖ್ಯ ಸಂಪಾದಕ

ಪಿಟಿಐ Updated:

ಅಕ್ಷರ ಗಾತ್ರ : | |

ರವಿ ಅಗರ್‌ವಾಲ್

ವಾಷಿಂಗ್ಟನ್‌: ಜಾಗತಿಕ ವ್ಯವಹಾರಗಳ ಕುರಿತ ವಿಚಾರಗಳನ್ನು ಪ್ರಕಟಿಸುವ ಅಮೆರಿಕ ಮೂಲದ ‘ಫಾರಿನ್ ಪಾಲಿಸಿ‘ ನಿಯತಕಾಲಿಕೆಗೆ ಭಾರತ ಮೂಲದ ರವಿ ಅಗರ್‌ವಾಲ್ ಅವರು ಮುಖ್ಯ ಸಂಪಾದಕರಾಗಿ ನೇಮಕಗೊಂಡಿದ್ದಾರೆ.

ಈ ಹಿಂದೆ ರವಿ ಅಗರ್‌ವಾಲ್ ಅವರು ಇದೇ ನಿಯತಕಾಲಿಕೆಯಲ್ಲಿ ವ್ಯವಸ್ಥಾಪಕ ಸಂಪಾದಕರಾಗಿದ್ದರು. ಈಗ ಅವರಿಗೆ ಬಡ್ತಿ ನೀಡಿ, ಮುಖ್ಯ ಸಂಪಾದಕರನ್ನಾಗಿ ನೇಮಿಸಲಾಗಿದೆ.

‘ರವಿ ಅಗರ್‌ವಾಲ್‌ ತಮ್ಮಲ್ಲಿರುವ ಜಾಗತಿಕ ಮಟ್ಟದ ಉನ್ನತ ಜ್ಞಾನದೊಂದಿಗೆ ಪತ್ರಿಕೆಯನ್ನು ಉತ್ತಮ ರೀತಿಯಲ್ಲಿ ಹೊರ ತರಲಿದ್ದಾರೆ. ದೂರದೃಷ್ಟಿ ಹೊಂದಿರುವ ಅವರು, ಶ್ರೇಷ್ಠ ಲೇಖನಗಳ ಮೂಲಕ ಜ್ಞಾನವನ್ನು ಹಂಚುವ ಉತ್ಸಾಹ ಹೊಂದಿದ್ದಾರೆ. ಆರು ದಶಕಗಳಿಂದ ಪ್ರಕಟವಾಗುತ್ತಿರುವ ಫಾರಿನ್ ಪಾಲಿಸಿ ಪತ್ರಿಕೆಯನ್ನು ಅವರು ಮುನ್ನಡೆಸಲಿದ್ದಾರೆ' ಎಂದು ನಿಯತಕಾಲಿಕೆಯ ಸಿಇಒ ಆ್ಯನ್‌ ಮ್ಯಾಕ್‌ಡೇನಿಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2018ರಲ್ಲಿ ಫಾರಿನ್‌ ಪಾಲಿಸಿ ಪತ್ರಿಕೆಗೆ ಸೇರುವ ಮೊದಲು ರವಿ ಅಗರ್‌ವಾಲ್ ಅವರು ಸಿಎನ್‌ಎನ್‌ನಲ್ಲಿ 11 ವರ್ಷಗಳ ಕಾಲ, ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕ ಖಂಡಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಸಿಎನ್‌ಎನ್‌ ನವದೆಹಲಿ ಬ್ಯೂರೊ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು