ಗುರುವಾರ , ಜುಲೈ 7, 2022
23 °C

ನಾರ್ವೆಯಲ್ಲಿ ಅಮೆರಿಕದ ವಿಮಾನ ಪತನ: ನಾಲ್ವರು ಯೋಧರ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಹೆಲ್ಸಿಂಕಿ(ನಾರ್ವೆ): ನ್ಯಾಟೊ ಯುದ್ಧ ತಾಲೀಮಿನ ವೇಳೆ ವಿಮಾನ ಪತನಗೊಂಡಿದ್ದು, ಅಮೆರಿಕದ ನಾಲ್ವರು ಯೋಧರು ಮೃತಪಟ್ಟಿದ್ದಾರೆ ಎಂದು ನಾರ್ವೆ ಪ್ರಧಾನ ಮಂತ್ರಿ ಶನಿವಾರ ತಿಳಿಸಿದ್ದಾರೆ. ಆದರೆ, ಉಕ್ರೇನ್ ಬಿಕ್ಕಟ್ಟಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಅವರು ಸಾವಿಗೀಡಾಗಿದ್ದಾರೆ ಎಂದು ನಾರ್ವೆ ಪ್ರಧಾನಿ ಜೋನಸ್ ಗರ್ ಸ್ಟೋರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

'ಸೈನಿಕರು ನ್ಯಾಟೊ ತಾಲೀಮಿನಲ್ಲಿ ಭಾಗವಹಿಸಿದ್ದರು. ಮೃತ ಯೋಧರ ಕುಟುಂಬ, ಸಂಬಂಧಿಕರು ಮತ್ತು ಸಹಯೋಧರಿಗೆ ನನ್ನ ಸಂತಾಪಗಳು’ ಎಂದು ಅವರು ತಿಳಿಸಿದ್ದಾರೆ.

ಪತನಗೊಂಡ ವಿ-22ಬಿ ಓಸ್ಪ್ರೇ ವಿಮಾನವು ಅಮೆರಿಕಕ್ಕೆ ಸೇರಿದ್ದಾಗಿದೆ ಎಂದು ನಾರ್ವೆಯ ಸಶಸ್ತ್ರ ಪಡೆಗಳು ಹೇಳಿವೆ.

‘ವಿಮಾನದಲ್ಲಿ ನಾಲ್ವರು ಸಿಬ್ಬಂದಿ ಇದ್ದರು. ವಿಮಾನವು ಉತ್ತರ ನಾರ್ವೆಯ ನಾರ್ಡ್‌ಲ್ಯಾಂಡ್ ಕೌಂಟಿಯಲ್ಲಿ ‘ಕೋಲ್ಡ್ ರೆಸ್ಪಾನ್ಸ್’ ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿತ್ತು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು