ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ20 ಶೃಂಗಸಭೆ: ಕೋವಿಡ್‌ ಲಸಿಕೆಯ ನ್ಯಾಯಸಮ್ಮತ ವಿತರಣೆಗೆ ವಿಶ್ವ ನಾಯಕರ ಸಮ್ಮತಿ

Last Updated 22 ನವೆಂಬರ್ 2020, 6:29 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕೋವಿಡ್‌–19 ಲಸಿಕೆಯ ನ್ಯಾಯಸಮ್ಮತ ವಿತರಣೆಗೆ ಜಿ20 ದೇಶಗಳ ನಾಯಕರು ಸಮ್ಮತಿಸಿದ್ದಾರೆ. ಲಸಿಕೆ ವಿತರಣೆ, ಪರೀಕ್ಷೆಯಿಂದ ಬಡ ದೇಶಗಳು ಹೊರಗುಳಿಯದಂತೆ ನೋಡಿಕೊಳ್ಳುವುದು, ಆ ದೇಶಗಳಿಗೆ ಸಾಲದ ನೆರವು ವಿಸ್ತರಣೆ ಬಗ್ಗೆ ಜಿ20 ದೇಶಗಳ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

‘ಎಲ್ಲ ಜನರಿಗೆ ಅವರ ಕೈಗೆಟುಕುವ ದರದಲ್ಲಿ ಮತ್ತು ನ್ಯಾಯಯುತ ವಿತರಣೆ ಖಚಿತಪಡಿಸಿಕೊಳ್ಳುವ ವಿಚಾರದಲ್ಲಿ ಯಾವುದೇ ಪ್ರಯತ್ನವನ್ನು ಸದಸ್ಯರ ರಾಷ್ಟ್ರಗಳು ಕೈಬಿಡುವುದಿಲ್ಲ ಎಂಬುದನ್ನು ದೃಢಪಡಿಸುತ್ತೇವೆ’ ಎಂದು ಜಿ20 ಸದಸ್ಯ ರಾಷ್ಟ್ರಗಳು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕ ಆರ್ಥಿಕತೆಯು ಚೇತರಿಸಿಕೊಳ್ಳಲಾರಂಭಿಸಿದೆ. ಆದರೆ, ಚೇತರಿಕೆಯು ತೀರಾ ಅನಿಶ್ಚಿತ ಹಾಗೂ ಮತ್ತೆ ಕುಸಿಯುವ ಅಪಾಯ ಎದುರಿಸುತ್ತಿದೆ ಎಂದು ಜಾಗತಿಕ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಜನಜೀವನ ಸುರಕ್ಷತೆ, ಉದ್ಯೋಗ, ಆದಾಯ, ಬ್ಯಾಂಕುಗಳ ಅಭಿವೃದ್ಧಿ, ಬಿಕ್ಕಟ್ಟು ನಿರ್ವಹಿಸುವ ನಿಟ್ಟಿನಲ್ಲಿ ದೇಶಗಳಿಗೆ ನೆರವಾಗಲು ಡೆವಲಪ್‌ಮೆಂಟ್ ಬ್ಯಾಂಕ್‌ಗಳಿಗೆ ಬೆಂಬಲ ನೀಡಲು ಲಭ್ಯವಿರುವ ಎಲ್ಲ ನೀತಿ, ‍ಪರಿಕರಗಳನ್ನು ಬಳಸಿಕೊಳ್ಳುವ ಬಗ್ಗೆಯೂ ಸದಸ್ಯ ರಾಷ್ಟ್ರಗಳು ಸಮ್ಮತಿ ಸೂಚಿಸಿವೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ಈ ಬಾರಿಯ ಜಿ20 ಶೃಂಗಸಭೆಯನ್ನು ವರ್ಚುವಲ್ ಆಗಿ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT