ಶುಕ್ರವಾರ, ಮೇ 20, 2022
26 °C

ಕೋವಿಡ್‌ನಿಂದ ರಕ್ಷಿಸುವ ವಂಶವಾಹಿ ತಳಿ ಪತ್ತೆ- ಅಂತರರಾಷ್ಟ್ರೀಯ ಸಂಶೋಧಕರ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಕೋವಿಡ್‌ನ ತೀವ್ರ ಸ್ವರೂಪದ ಸೋಂಕಿನಿಂದ ರಕ್ಷಿಸುವ ನಿರ್ದಿಷ್ಟ ಅನುವಂಶಿಕ ತಳಿಯೊಂದನ್ನು ಸಂಶೋಧಕರು ಗುರುತಿಸಿದ್ದಾರೆ.

ಸ್ವೀಡನ್‌ನಲ್ಲಿರುವ ಕರೊಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನ ಅಂತರರಾಷ್ಟ್ರೀಯ ಸಂಶೋಧಕರ ತಂಡ ವಿವಿಧ ವಂಶಾವಳಿಗಳನ್ನು ಅಧ್ಯಯನ ನಡೆಸಿದ ಬಳಿಕ ಈ ನಿರ್ದಿಷ್ಟ ಅನುವಂಶಿಕ ತಳಿಯನ್ನು ಗುರುತಿಸಿದೆ. ‘ನೇಚರ್ ಜಿನೆಟಿಕ್ಸ್‌‘ ನಿಯತಕಾಲಿಕದಲ್ಲಿ ಇದನ್ನು ಪ್ರಕಟಿಸಲಾಗಿದೆ. 

ಕೋವಿಡ್‌ನಿಂದ ನಾವು ತೀವ್ರವಾಗಿ ತೊಂದರೆಗೆ ಒಳಗಾಗಿದ್ದೇವೆಯೇ ಅಥವಾ ಸೌಮ್ಯ ಸ್ವರೂಪದ ರೋಗ ಲಕ್ಷಣದೊಂದಿಗೆ ಕೋವಿಡ್‌ನಿಂದ ಪಾರಾಗಿದ್ದೇವೆಯೇ ಎಂಬುದರ ಮೇಲೆ ವಂಶವಾಹಿ ತಳಿ ಪ್ರಭಾವ ಬೀರಿರುತ್ತದೆ. ಯುರೋಪ್‌ನ ವಂಶಾವಳಿಯೊಂದಿಗೆ ನಿರ್ದಿಷ್ಟ ಡಿಎನ್‌ಎ ಹೊಂದಿದ್ದ ಜನರು ಕೋವಿಡ್‌ ಸೋಂಕಿಗೆ ಒಳಗಾಗುವ ಅಪಾಯ ಶೇ 20ರಷ್ಟು ಕಡಿಮೆ ಇರುವುದು ಈ ಹಿಂದಿನ ಅಧ್ಯಯನದಿಂದ ಗೊತ್ತಾಗಿತ್ತು ಎಂದು ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು