ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯಲ್ಲಿ ಕೋವಿಡ್‌ ಹೆಚ್ಚಳ: ಲಕ್ಷ ಗಡಿ ದಾಟಿದ ಮೃತರ ಸಂಖ್ಯೆ

Last Updated 25 ನವೆಂಬರ್ 2021, 11:20 IST
ಅಕ್ಷರ ಗಾತ್ರ

ಬರ್ಲಿನ್: ಕೋವಿಡ್‌ನಿಂದಾಗಿ ಜರ್ಮನಿಯಲ್ಲಿ ಒಂದು ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಗುರುವಾರ ಬಿಡುಗಡೆಯಾಗಿರುವ ಅಂಕಿ–ಅಂಶಗಳು ಹೇಳುತ್ತವೆ.

ಕೋವಿಡ್‌–19 ಪಿಡುಗು ಕಾಣಿಸಿಕೊಂಡ ನಂತರ ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕಿನಿಂದಾಗಿ ಲಕ್ಷ ಜನರು ಮೃತಪಟ್ಟ ದೇಶಗಳ ಸಾಲಿಗೆ ಜರ್ಮನಿ ಸೇರಿದಂತಾಗಿದೆ. ಯುರೋಪ್‌ ರಾಷ್ಟ್ರಗಳಾದ ರಷ್ಯಾ, ಬ್ರಿಟನ್‌, ಇಟಲಿ ಹಾಗೂ ಫ್ರಾನ್ಸ್‌ನಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ಲಕ್ಷ ಗಡಿ ದಾಟಿದೆ.

‘ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 351 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 1,00,119ಕ್ಕೇರಿದಂತಾಗಿದೆ’ ಎಂದು ರೋಗ ನಿಯಂತ್ರಣ ಸಂಸ್ಥೆ ತಿಳಿಸಿದೆ.

ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡುಬರುತ್ತಿರುವ ಕಾರಣ, ತಜ್ಞರ ತಂಡವೊಂದನ್ನು ರಚಿಸುವುದಾಗಿ ಜರ್ಮನಿ ಸರ್ಕಾರ ಘೋಷಿಸಿದೆ. ಕೋವಿಡ್‌ ಪ್ರಸರಣ ತಡೆಗಟ್ಟಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಈ ತಂಡ ಸಲಹೆ ನೀಡಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT