ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: 2.93 ಕೋಟಿ ಸೋಂಕಿತರು, 9.29 ಲಕ್ಷ ಮಂದಿ ಮೃತ 

Last Updated 15 ಸೆಪ್ಟೆಂಬರ್ 2020, 16:26 IST
ಅಕ್ಷರ ಗಾತ್ರ

ವಾಷಿಂಗ್ಟನ್:ಜಗತ್ತಿನಾದ್ಯಂತ ಕೊರೊನಾವೈರಸ್ಸೋಂಕಿತರಸಂಖ್ಯೆ ಮಂಗಳವಾರ2,93,23,247ಕ್ಕೇರಿದೆ. ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ಕೋವಿಡ್ ಸಂಪನ್ಮೂಲ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಅಮೆರಿಕದಲ್ಲಿ ಮಂದಿ 65,57,802 ಸೋಂಕಿತರಿದ್ದಾರೆ. ಅತೀ ಹೆಚ್ಚು ಸೋಂಕಿತರಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು ಇಲ್ಲಿ 49,30,236 ಸೋಂಕಿತರಿದ್ದಾರೆ.

ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ 43,45,610 ಮತ್ತು ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 10,69,873ಆಗಿದೆ.

ಕೋವಿಡ್ ಸೋಂಕಿನಿಂದ ಈವರೆಗೆ 9,29,444 ಮಂದಿ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ 1,94,674ಮಂದಿ ಮೃತ ಪಟ್ಟಿದ್ದು, ಬ್ರೆಜಿಲ್‌ನಲ್ಲಿ 1,32,006 ಮಂದಿ ಮೃತಪಟ್ಟಿದ್ದಾರೆ.

ಏತನ್ಮಧ್ಯೆ, ದೇಶಗಳು ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕಾಗಿ 2020ರ ಅಂತ್ಯದವರೆಗೆ ಜಾಗತಿಕ ಕದನ ವಿರಾಮವನ್ನು ಮುಂದೂಡುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಮುಂದಿನ ವಾರನಡೆಯಲಿರುವ ವಿಶ್ವ ನಾಯಕರೊಂದಿಗಿನ ತಮ್ಮ ವಾರ್ಷಿಕ ಭಾಷಣದಲ್ಲಿ ಹೇಳಲಿದ್ದಾರೆ.

ಕೋವಿಡ್ ಪರೀಕ್ಷೆಯ ಕೊರತೆಯು 2ನೇ ಅಲೆ ವಿರುದ್ಧಹೋರಾಡುವ ಪ್ರಯತ್ನಗಳನ್ನು ಬಾಧಿಸಲಿದೆ

ಬ್ರಿಟನ್‌ನಲ್ಲಿ ಕೋವಿಡ್ ಪರೀಕ್ಷೆಯ ಕೊರತೆಯು ವೈದ್ಯಕೀಯ ಸೇವೆಗಳನ್ನು ಪುನಃಸ್ಥಾಪಿಸಲು ಮತ್ತು ಈ ಚಳಿಗಾಲದಲ್ಲಿ ಕೊರೊನಾವೈರಸ್ ಪ್ರಕರಣಗಳಲ್ಲಿ ಸಂಭವನೀಯ ಏರಿಕೆಗೆ ತಯಾರಿ ನಡೆಸುವ ಪ್ರಯತ್ನಗಳನ್ನು ಅಪಾಯಕ್ಕೆ ತಳ್ಳುತ್ತಿದೆ ಎಂದು ಇಂಗ್ಲೆಂಡ್‌ನ ಆಸ್ಪತ್ರೆಗಳನ್ನು ಪ್ರತಿನಿಧಿಸುವ ಗುಂಪು ಮಂಗಳವಾರ ತಿಳಿಸಿದೆ.

ಅಸಮರ್ಪಕವಾದ ಪರೀಕ್ಷೆಯು ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿನ ಸಿಬ್ಬಂದಿಗಳ ಗೈರು ಹಾಜರಿಗೆ ಕಾರಣವಾಗಿದೆ. ಏಕೆಂದರೆ ಸಿಬ್ಬಂದಿಗಳಿಗೆ ಸ್ವಯಂಪ್ರೇರಿತವಾಗಿ ಪ್ರತ್ಯೇಕ ಇರುವಂತೆ ಬಲವಂತ ಮಾಡಲಾಗುತ್ತಿದೆ. ಆದರೆ ಅವರ ಕುಟುಂಬ ಸದಸ್ಯರು ವೈರಸ್‌ಗೆ ಒಡ್ಡಿಕೊಂಡ ನಂತರ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯುತ್ತಾರೆ ಎಂದು ಎನ್‌ಎಚ್‌ಎಸ್ ಪೂರೈಕೆದಾರರು ತಿಳಿಸಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಮೂರು ವಿಭಿನ್ನ ನಗರಗಳಲ್ಲಿನ ಆಸ್ಪತ್ರೆಯ ಮುಖ್ಯಸ್ಥರು ಪರೀಕ್ಷೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು ಎಂದು ಗುಂಪಿನ ಸಿಇಒ ಕ್ರಿಸ್ ಹಾಪ್ಸನ್ ಹೇಳಿದ್ದಾರೆ.

ಸಿಂಗಾಪುರದಲ್ಲಿ 34 ಹೊಸ ಪ್ರಕರಣ
ಸಿಂಗಾಪುರದಲ್ಲಿ 34 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ.ರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7,488 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಒಟ್ಟು ಆರು ಪ್ರಕರಣಗಳಲ್ಲಿ ಇತ್ತೀಚೆಗೆ ಸಿಂಗಾಪುರಕ್ಕೆ ಪ್ರಯಾಣಿಸಿದ ವಿದೇಶಿಯರು ಮತ್ತು ಇವರೆಲ್ಲರನ್ನೂ ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ (ಎಂಒಹೆಚ್) ತಿಳಿಸಿದೆ.

ಜನಸಂಖ್ಯೆ ಶೇ.60ರಷ್ಟು ಮಂದಿಗೆ ಕೊರೊನಾವೈರಸ್ ಪೂರೈಕೆ: ದಕ್ಷಿಣ ಕೊರಿಯಾ ಪ್ರಧಾನಿ
ದಕ್ಷಿಣ ಕೊರಿಯಾದಲ್ಲಿ 3 ಕೋಟಿ ಜನರಿಗೆ ಅಂದರೆಜನಸಂಖ್ಯೆಯ 60% ಜನರಿಗೆ ಕೋವಿಡ್ -19 ಲಸಿಕೆಗಳನ್ನು ಶೀಘ್ರವಾಗಿ ಪೂರೈಸಲಾಗುವುದು ಎಂದು ಪ್ರಧಾನಿ ಚುಂಗ್ ಸೈಕ್ಯುನ್ ಮಂಗಳವಾರ ಹೇಳಿದ್ದಾರೆ. ಈ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಲಸಿಕೆ ತಯಾರಕರೊಂದಿಗೆ ಮಾತುಕತೆ ನಡೆಸಲಿದೆ. ದೇಶದ ಸಂಪೂರ್ಣ ಜನಸಂಖ್ಯೆಗೆ ಲಸಿಕೆ ನೀಡಲು ಅಧಿಕಾರಿಗಳು ಬಯಸಿದರೆ, ಲಸಿಕೆಯ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಅಭಿವೃದ್ಧಿಯ ಸುತ್ತಲಿನ ಅನಿಶ್ಚಿತತೆಯು ಈ ಹೂಡಿಕೆಯನ್ನು ಸೀಮಿತಗೊಳಿಸುತ್ತಿದೆ ಎಂದಿದ್ದಾರೆ ಚುಂಗ್.

ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ ಸೋಮವಾರ ಮಧ್ಯರಾತ್ರಿಯ ವೇಳೆಗೆ 106 ಹೊಸ ಪ್ರಕರಣಗಳನ್ನು ವರದಿ ಮಾಡಿದೆ.ಒಟ್ಟು ಸೋಂಕು ಪ್ರಕರಣಗಳಸಂಖ್ಯೆ22,391 ಕ್ಕೆ ತಲುಪಿದ್ದು ಸಾವಿನ ಪ್ರಮಾಣ 367 ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT