ಸೋಮವಾರ, ಜೂನ್ 21, 2021
27 °C

ಅಮೆರಿಕದ ದಿನಸಿ ಮಳಿಗೆಯಲ್ಲಿ ಶೂಟೌಟ್: ಹಲವರ ಹತ್ಯೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

AFP Photo

ಬೋಲ್ಡರ್, ಯುಎಸ್: ಅಮೆರಿಕದ ಕೊಲೆರಾಡೊದಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ ಪೊಲೀಸ್ ಅಧಿಕಾರಿ ಸಹಿತ ಹಲವರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೋಲ್ಡರ್‌ನ ಕಿಂಗ್ ಸೂಪರ್ಸ್ ಸ್ಟೋರ್‌ನಲ್ಲಿ ಈ ಕೃತ್ಯ ನಡೆದಿದ್ದು, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಾಂಡರ್ ಕೆರ್ರಿ ಯಮಗುಚಿ ತಿಳಿಸಿದ್ದಾರೆ.

ಘಟನೆಯಲ್ಲಿ ಹಲವರು ಮೃತಪಟ್ಟಿದ್ದಾರೆ. ನಮ್ಮ ತಂಡದ ಪೊಲೀಸ್ ಅಧಿಕಾರಿಯೊಬ್ಬರು ಕೂಡ ಮೃತಪಟ್ಟಿದ್ದಾರೆ. ಒಟ್ಟು ಎಷ್ಟು ಜನರು ಸಾವನ್ನಪ್ಪಿದ್ದಾರೆ ಎನ್ನುವುದು ಖಚಿತವಾಗಿಲ್ಲ, ಶಂಕಿತ ಕೂಡ ಗಾಯಗೊಂಡಿದ್ದು, ಆತನನ್ನು ಬಂಧಿಸಿದ್ದೇವೆ ಎಂದು ಯಮಗುಚಿ ಹೇಳಿದ್ದಾರೆ.

ಕನಿಷ್ಠ 6 ಮಂದಿ ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಅಮೆರಿಕದ ಮಧ್ಯಮಗಳು ವರದಿ ಮಾಡಿವೆ.

ಶೂಟೌಟ್ ಪ್ರಕರಣದ ಬಗ್ಗೆ ಕೊಲೆರಾಡೊ ಗವರ್ನರ್ ಜೇರ್ಡ್ ಪೊಲಿಸ್, ಬೋಲ್ಡರ್ ಮೇಯರ್ ಸ್ಯಾಮ್ ವೀವರ್ ಅಘಾತ ವ್ಯಕ್ತಪಡಿಸಿದ್ದು, ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು