ಶುಕ್ರವಾರ, ಅಕ್ಟೋಬರ್ 23, 2020
21 °C
ಸೌಮ್ಯಸ್ವರೂಪದ ಲಸಿಕೆ ಅಭಿವೃದ್ಧಿಗೆ ಸಹಕಾರ ನಿರೀಕ್ಷೆ

ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಪ್ರತಿಕಾಯ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬರ್ಲಿನ್‌: ಕೊರೊನಾ ವೈರಸ್‌ನ ಸೋಂಕಿನ ವಿರುದ್ಧ ಪರಿಣಾಮಕಾರಿಯಾದ ಪ್ರತಿಕಾಯಗಳನ್ನು ಪತ್ತೆ ಹಚ್ಚಿರುವುದಾಗಿ ಜರ್ಮನಿ ಮೂಲದ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.

ಈ ಪ್ರತಿಕಾಯಗಳು ಕೋವಿಡ್‌–19ಗೆ ಸೌಮ್ಯಸ್ವರೂಪದ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರಿಯಾಗಲಿವೆ ಎಂದೂ ವಿಜ್ಞಾನಿಗಳು ಆಶಾಭಾವ ವ್ಯಕ್ತಪಡಿಸಿದ್ದಾರೆ.

ಜರ್ಮನ್‌ ಸೆಂಟರ್‌ ಫಾರ್ ನ್ಯೂರೊಡಿಜನರೇಟಿವ್‌ ಡಿಸೀಸ್‌ ಆ್ಯಂಡ್‌ ಚಾರಿಟಿ ಸಂಸ್ಥೆಯ ವಿಜ್ಞಾನಿಗಳು ಈ ಸಂಬಂಧ ಸಂಶೋಧನೆ ಕೈಗೊಂಡಿದ್ದಾರೆ. ಕೋವಿಡ್‌–19ನಿಂದ ಗುಣಮುಖರಾದವರ ರಕ್ತದಿಂದ 600 ಬಗೆಯ ಪ್ರತಿಕಾಯಗಳನ್ನು ಪ್ರತ್ಯೇಕಿಸಿ, ಅಧ್ಯಯನ ನಡೆಸಿದ್ದಾರೆ.

ಕೊರೊನಾ ವೈರಸ್‌ನಿಂದಾಗುವ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲ ಪ್ರತಿಕಾಯಗಳನ್ನಷ್ಟೇ ಪ್ರತ್ಯೇಕಿಸಲು ವಿಜ್ಞಾನಿಗಳು ಒತ್ತು ನೀಡಿದಾಗ, ಕೆಲವೇ ಪ್ರತಿಕಾಯಗಳು ನಿರೀಕ್ಷಿತ ಫಲಿತಾಂಶ ನೀಡಿದವು ಎಂದು ಮೂಲಗಳು ಹೇಳಿವೆ.

ಪರಿಣಾಮಕಾರಿಯಾದ ಪ್ರತಿಕಾಯಗಳನ್ನು ಪ್ರಯೋಗಾಲಯದಲ್ಲಿ ಕೃತಕವಾಗಿ ಅಭಿವೃದ್ಧಿಪಡಿಸಲಾಯಿತು. ಈ ರೀತಿ ಅಭಿವೃದ್ದಿಪಡಿಸಲಾದ ಪ್ರತಿಕಾಯಗಳು, ಕೊರೊನಾ ವೈರಸ್‌ನಂತಹ ರೋಗಕಾರಕಗಳು ಜೀವಕೋಶಗಳನ್ನು ಪ್ರವೇಶಿಸುವುದನ್ನು ತಡೆಯುವಲ್ಲಿ ಯಶಸ್ವಿಯಾದವು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು