ಬುಧವಾರ, ಜನವರಿ 27, 2021
27 °C

ಹಾಂಗ್‌ಕಾಂಗ್‌: ‘ಅನಧಿಕೃತ ಪ್ರತಿಭಟನೆ’ಯಲ್ಲಿ ಭಾಗಿ ಆರೋಪ– 8 ಮಂದಿ ಬಂಧನ

ಎಪಿ Updated:

ಅಕ್ಷರ ಗಾತ್ರ : | |

Prajavani

ಹಾಂಗ್‌ಕಾಂಗ್‌: ಅನುಮತಿ ಪಡೆಯದೇ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪದಡಿ, ಪ್ರಜಾಪ್ರಭುತ್ವ ಪರ ಹೋರಾಟ ನಡೆಸುವ ಎಂಟು ಜನ ಕಾರ್ಯಕರ್ತರನ್ನು ಹಾಂಗ್‌ಕಾಂಗ್‌ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಅನಧಿಕೃತವಾಗಿ ಪ್ರತಿಭಟನೆ ಆಯೋಜನೆ ಮತ್ತು ಪ್ರತಿಭಟನೆಯಲ್ಲಿ ಭಾಗಿಯಾದ 24ರಿಂದ 64 ವಯಸ್ಸಿನ 8 ಮಂದಿಯನ್ನು ಬಂಧಿಸಲಾಗಿದೆ ಎಂದೂ ಪೊಲೀಸರು ತಿಳಿಸಿದರು.

ರಾಷ್ಟ್ರೀಯ ಭದ್ರತಾ ಕಾನೂನು ಅನ್ನು ವಿರೋಧಿಸಿ ಜುಲೈ 1 ರಂದು ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವು ಮಾಜಿ ಸಂಸದರನ್ನು ಸಹ ಬಂಧಿಸಲಾಗಿದೆ.

ಮಾಜಿ ಸಂಸದರಾದ ವು ಚಿ-ವಾಯ್, ಎಡ್ಡಿ ಚು ಮತ್ತು ಲೆಯುಂಗ್ ಕ್ವಾಕ್ ಹಂಗ್ ಅವರನ್ನು ಅವರ ನಿವಾಸದಲ್ಲಿ ಬಂಧಿಸಲಾಗಿದೆ. ತಮ್ಮನ್ನು ಬಂಧಿಸಿರುವ ಕುರಿತು ಈ ಮೂವರು ಹೋರಾಟಗಾರರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಜುಲೈ 1 ರ ಪ್ರತಿಭಟನೆ ವೇಳೆ 370 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಇದರಲ್ಲಿ 10 ಮಂದಿಯನ್ನು ರಾಷ್ಟ್ರೀಯ ಭದ್ರತಾ ಕಾನೂನಿನಡಿ ಬಂಧಿಸಲಾಗಿತ್ತು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು