ವಾಷಿಂಗ್ಟನ್: 1.9 ಟ್ರಿಲಿಯನ್ ಡಾಲರ್ ಮೊತ್ತದ ಕೋವಿಡ್–19 ಪರಿಹಾರ ಪ್ಯಾಕೇಜ್‌ಗೆ ಅಮೆರಿಕದ ಸಂಸತ್ ಅನುಮೋದನೆ ನೀಡಿದೆ.

219–212 ಮತಗಳಿಂದಈ ಪ್ಯಾಕೇಜ್‌ಗೆ ಅನುಮೋದನೆ ಪಡೆಯುವ ಮೂಲಕ ಅಧ್ಯಕ್ಷ ಜೋ ಬೈಡನ್ ಅವರು ಗೆಲುವಿನಿಂದ ಬೀಗಿದ್ದಾರೆ.

ಕನಿಷ್ಠ ವೇತನ ಹೆಚ್ಚಳ ಅಂಶವನ್ನು ಈ ಪ್ಯಾಕೇಜ್‌ನಿಂದ ಕೈಬಿಡಬೇಕು ಎಂದು ರಿಪಬ್ಲಿಕನ್ ಸಂಸದರು ಪಟ್ಟು ಹಿಡಿದಿದ್ದರು. ಈ ಪಟ್ಟಿಗೆ ಕೊನೆಗೂ ಮಣಿದ ಸಂಸತ್, ಪ್ಯಾಕೇಜ್‌ಗೆ ಅನುಮೋದನೆಯನ್ನು ನೀಡಿದೆ. ಆದರೆ, ರಾಜ್ಯಗಳಿಗೆ ಅನುದಾನ ಹಂಚಿಕೆ ಹಾಗೂ ಇತರ ವಿಷಯಗಳು ಮುನ್ನೆಲೆಗೆ ಬಂದಾಗ ಡೆಮಾಕ್ರಟಿಕ್ ಪಕ್ಷದ ಸಂಸದರು ತಮ್ಮ ಬಲ ಪ್ರದರ್ಶಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಈ ಪ್ಯಾಕೇಜ್ ಬಹಳ ವೆಚ್ಚದಾಯಕವಾಗಿದೆ. ಶಿಕ್ಷಣಕ್ಕೆ ಕಡಿಮೆ ಅನುದಾನ ಸಿಗಲಿದೆ. ಇನ್ನು ಡೆಮಾಕ್ರಟಿಕ್ ಸಂಸದರ ಕ್ಷೇತ್ರಗಳಿಗೆ ಉದಾರವಾಗಿ ಅನುದಾನ ನೀಡುವ ಉದ್ದೇಶದಿಂದ ಈ ಪ್ಯಾಕೇಜ್ ರೂಪಿಸಲಾಗಿದೆ’ ಎಂದು ರಿಪಬ್ಲಿಕನ್ ಪಕ್ಷದ ಕೆಲವು ಸಂಸದರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.