ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊದಲ್ಲಿ ಬಾಯ್ತೆರೆದ ಭೂಮಿ: ವಿಸ್ತರಿಸುತ್ತಲೇ ಇದೆ ಬೃಹತ್ ಬಾವಿಯಾಕಾರದ ಹೊಂಡ

Last Updated 6 ಜೂನ್ 2021, 11:15 IST
ಅಕ್ಷರ ಗಾತ್ರ

ಮೆಕ್ಸಿಕೊ: ಸೆಂಟ್ರಲ್‌ ಮೆಕ್ಸಿಕೊ ಪ್ರದೇಶವೊಂದರಲ್ಲಿ ಬೃಹತ್‌ ಬಾವಿಯಾಕಾರದಲ್ಲಿ ಭೂಮಿ ಕುಸಿದಿದ್ದು ಸಮೀಪದಲ್ಲೇ ಇರುವ ಮನೆಯನ್ನು ನುಂಗಿಹಾಕುವ ಆತಂಕ ಎದುರಾಗಿದೆ.

ಪ್ಯೂಬ್ಲಾ ಎಂಬ ಪ್ರದೇಶದಲ್ಲಿ ಶನಿವಾರ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಕುಸಿತ ಸಮಯ ಉರುಳಿದಂತೆ ಬೃಹತ್ ಗಾತ್ರವಾಗುತ್ತ ಬಂದಿದೆ. ನೀರು ತುಂಬಿದ ದೊಡ್ಡ ಹೊಂಡವು ಆರಂಭದಲ್ಲಿ 5 ಮೀಟರ್‌ನಷ್ಟು ಅಗಲವಿತ್ತು. ಇದೀಗ 80 ಮೀಟರ್‌ಗೂ ಹೆಚ್ಚು ಅಗಲಕ್ಕೆ ವಿಸ್ತರಿಸಿಕೊಂಡಿದೆ.

ಬೃಹತ್‌ ಹೊಂಡದ ವೈಮಾನಿಕ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು, ಚಿತ್ರಗಳು ನೋಡುಗರ ಎದೆ ಬಡಿತ ಜೋರಾಗಿಸುವಂತಿವೆ. ಭೂಮಿಯೇ ಬಾಯ್ಬಿಟ್ಟಂತೆ ಎಲ್ಲವೂ ಕುಸಿದು ಅಡಿ ಸೇರುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT