ಭಾನುವಾರ, ಅಕ್ಟೋಬರ್ 25, 2020
28 °C

ಕೊರೊನಾ ವೈರಸ್ ಮಾಯವಾಗಲಿದೆ, ಅದು ಈಗಾಗಲೇ ಇಲ್ಲವಾಗುತ್ತಿದೆ: ಟ್ರಂಪ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮಾಸ್ಕ್ ತೆಗೆದು ಬೆಂಬಲಿಗರ ಮುಂದೆ ಕಾಣಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌

ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂಬತ್ತು ದಿನಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಶನಿವಾರ ಶ್ವೇತ ಭವನದ ಬಾಲ್ಕನಿಯಲ್ಲಿ ನಿಂತು ತಮ್ಮ ನೂರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.

ನಾನೀಗ ತುಂಬ ಚೆನ್ನಾಗಿರುವೆ ಎಂದಿರುವ ಅವರು, 'ಈ ಭಯಾನಕ ಚೀನಾ ವೈರಸ್‌ನ್ನು ನಮ್ಮ ದೇಶ ಬಗ್ಗುಬಡಿಯಲಿದೆ ಎಂದು ನಿಮಗೆಲ್ಲ ತಿಳಿಸಲು ಇಚ್ಛೆಸುತ್ತೇನೆ' ಎಂದಿದ್ದಾರೆ. ಟ್ರಂಪ್ ಮಾಸ್ಕ್ ತೆಗೆದು ಬೆಂಬಲಿಗರ ಮುಂದೆ ಕಾಣಿಸಿಕೊಂಡರು. ಬೆಂಬಲಿಗರಲ್ಲಿ ಬಹುತೇಕರು ಮಾಸ್ಕ್ ಧರಿಸಿದ್ದರು, ಆದರೆ ಅತ್ಯಲ್ಪ ಅಂತರವನ್ನಷ್ಟೇ ಕಾಯ್ದುಕೊಳ್ಳಲಾಗಿತ್ತು.

ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಿಗದಿಯಾಗಿದ್ದು, ಕೋವಿಡ್ ಪಾಸಿಟಿವ್ ಪತ್ತೆಯಾಗುವುದಕ್ಕೂ ಕೆಲವೇ ದಿನಗಳ ಮುಂಚೆ ಟ್ರಂಪ್ ಮತ್ತು ಅವರ ಎದುರಾಳಿ ಜೋ ಬೈಡನ್ ಚುನಾವಣೆ ಬಹಿರಂಗ ಚರ್ಚೆಯಲ್ಲಿ ಮುಖಾಮುಖಿಯಾಗಿದ್ದರು.

'ಅದು ಮಾಯವಾಗಲಿದೆ, ಈಗಾಗಲೇ ಇಲ್ಲವಾಗುತ್ತಿದೆ' ಎಂದು ಕೊರೊನಾ ವೈರಾಸ್ ಬಗ್ಗೆ ಬೆಂಬಲಿಗರಿಗೆ ತಿಳಿಸಿದ್ದಾರೆ. ಸೋಂಕಿನಿಂದ ಅಮೆರಿಕದಲ್ಲಿ ಈಗಾಗಲೇ 2.10 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸೋಂಕು ಸಾಂಕ್ರಾಮಿಕದಿಂದ ಅಮೆರಿಕದಲ್ಲಿ ಉಂಟಾಗಿರುವ‌ ಪರಿಸ್ಥಿತಿಯು ಚುನಾವಣೆಯಲ್ಲಿ ಟ್ರಂಪ್‌ಗೆ ಆಯ್ಕೆಯ ಅವಕಾಶ ದೂರಮಾಡುವ ಸಾಧ್ಯತೆ ಇದೆ.

'ಹೊರ ಬನ್ನಿ ಮತ್ತು ಮತದಾನ ಮಾಡಿ....ಐ ಲವ್ ಯೂ...' ಎಂದು ಟ್ರಂಪ್ ನೆರೆದವರಿಗೆ ಹೇಳಿದರು. ಕಾನೂನು ಮತ್ತು ಸುವ್ಯವಸ್ಥೆ ಕುರಿತಾದ ವಿಷಯಗಳನ್ನು ಒಳಗೊಂಡಂತೆ 18 ನಿಮಿಷಗಳ ಭಾಷಣ ಮಾಡಿದರು.

ಸಾಂಕ್ರಾಮಿಕ ನಿಯಂತ್ರಿಸುವಲ್ಲಿ ವಿಫಲರಾಗಿರುವ ಬಗ್ಗೆ ಸಾರ್ವಜನಿಕವಾಗಿ ಟ್ರಂಪ್ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇದನ್ನೇ ಬೈಡನ್, ಪ್ರಚಾರದ ಪ್ರಮುಖ ಅಂಶಗಳಲ್ಲಿ ಒಂದಾಗಿ ಬಳಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು