ಸೋಮವಾರ, ಆಗಸ್ಟ್ 8, 2022
21 °C

ಕೋವಿಡ್‌–19: ವಿಶ್ವಸಂಸ್ಥೆ ನಿರ್ಣಯ ಪರ ಮತ ಚಲಾಯಿಸಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಕೋವಿಡ್‌- 19 ಪಿಡುಗು ಕುರಿತು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ಪರವಾಗಿ ಭಾರತ ಹಾಗೂ 168 ರಾಷ್ಟ್ರಗಳು ಮತಚಲಾಯಿಸಿವೆ.

ಆದರೆ, ಈ ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಮೆರಿಕ ಹಾಗೂ ಇಸ್ರೇಲ್‌ ನಿರ್ಣಯದ ವಿರುದ್ಧ ಮತ ಚಲಾಯಿಸಿವೆ.

ಸಮಗ್ರ ಮತ್ತು ಸಮನ್ವಯದ ಮೂಲಕ ಕೋವಿಡ್–‌ 19 ಪಿಡುಗಿನ ವಿರುದ್ಧ ಹೋರಾಡಬೇಕೆಂಬ ನಿರ್ಣಯವನ್ನು ಶುಕ್ರವಾರ ನಡೆದ 193 ಸದಸ್ಯ ಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ಈ ನಿರ್ಣಯದ ಪರವಾಗಿ ಒಟ್ಟು 169 ರಾಷ್ಟ್ರಗಳು ಮತಚಲಾಯಿಸಿದವು. ಆದರೆ, ಉಕ್ರೇನ್ ಮತ್ತು ಹಂಗೇರಿ ಮತ ಚಲಾವಣೆ ಪ್ರಕ್ರಿಯೆಯಿಂದ ದೂರ ಉಳಿದವು.

ಇದನ್ನೂ ಓದಿ: 

ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಉಪ ಪ್ರತಿನಿಧಿ ಕೆ.ನಾಗರಾಜ್ ನಾಯ್ಡು ಅವರು, ‘ಕೋವಿಡ್– 19 ಕುರಿತು ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ಪರ ಭಾರತ ಮತ ಚಲಾಯಿಸಿದೆ. ಇದೊಂದು ಜಾಗತಿಕ ಮಟ್ಟದ ಬಹುದೊಡ್ಡ ಸವಾಲು ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನ ಗುರುತಿಸಿದ್ದು, ಇದರ ವಿರುದ್ಧ ಹೋರಾಡಲು ಏಕತೆ, ಸಮಗ್ರತೆ ಮತ್ತು ಬಹು ಪಕ್ಷೀಯ ಸಹಕಾರ ಅಗತ್ಯ’ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು