ಶುಕ್ರವಾರ, ಡಿಸೆಂಬರ್ 4, 2020
21 °C
ಶ್ವೇತಭವನದ ಫೆಲೊ ಕಾರ್ಯಕ್ರಮಕ್ಕೆ 14 ಮಂದಿ ನೇಮಕ

ಭಾರತೀಯ ಅಮೆರಿಕನ್ ಪಿಯಾ ದಾಂಡಿಯಾ ಶ್ವೇತಭವನದ ಫೆಲೊ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತೀಯ ಅಮೆರಿಕನ್‌ ಪಿಯಾ ದಾಂಡಿಯಾ ಅವರನ್ನು 2020–21ನೇ ಸಾಲಿನ ‘ಶ್ವೇತಭವನದ ಫೆಲೊ‘ ಆಗಿ ನೇಮಕ ಮಾಡಲಾಗಿದೆ.  

2020–21 ಸಾಲಿನಲ್ಲಿ ಶ್ವೇತಭವನಕ್ಕೆ ನೇಮಕವಾಗಿರುವ 14 ಫೆಲೊಗಳ ಪೈಕಿ ಭಾರತೀಯ – ಅಮೆರಿಕನ್‌ ದಾಂಡಿಯಾ ಕೂಡ ಒಬ್ಬರು. ಇವರು ನ್ಯೂಯಾರ್ಕ್‌ನ ಹಾರ್ಲೆಮ್‌ನಲ್ಲಿರುವ ಡೆಮಾಕ್ರಸಿ ಪ್ರೆಪ್ ಎಂಡ್ಯೂರೆನ್ಸ್ ಪ್ರೌಢ ಶಾಲೆಯ ಸ್ಥಾಪಕ ಪ್ರಾಚಾರ್ಯರು.

ಇದನ್ನೂ ಓದಿ: 

ಅಮೆರಿಕ ಅಧ್ಯಕ್ಷರಾಗಿದ್ದ ಲಿಂಡನ್ ಬಿ ಜಾನ್ಸನ್ ಅವರು 1964ರಲ್ಲಿ ‘ಶ್ವೇತಭವನದ ಫೆಲೊ‘ ಕಾರ್ಯಕ್ರಮವನ್ನು ಆರಂಭಿಸಿದರು. ‘ಫೆಲೊಗಳಿಗೆ ಫೆಡರಲ್ ಸರ್ಕಾರದ ಜತೆ ಕಾರ್ಯನಿರ್ವಹಿಸಲು ಉನ್ನತ ಮಟ್ಟದ ಅನುಭವ ನೀಡುವುದು ಹಾಗೂ ರಾಷ್ಟ್ರೀಯ ವ್ಯವಹಾರಗಳಲ್ಲಿ ಪಾಲ್ಗೊಳ್ಳುವುದನ್ನು ಉತ್ತೇಜಿಸುವ‘ ರೀತಿಯಲ್ಲಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮಾಧ್ಯಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ದಾಂಡಿಯಾ ಪ್ರಸ್ತುತ ಅಮೆರಿಕದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು