ಬುಧವಾರ, ನವೆಂಬರ್ 25, 2020
19 °C

ಬೈಡನ್‌ರ ಕೊರೊನಾ ವೈರಸ್ ತಡೆ ಕಾರ್ಯಪಡೆಯಲ್ಲಿ ಕರ್ನಾಟಕ ಮೂಲದ ವಿವೇಕ್ ಮೂರ್ತಿ?

ಪಿಟಿಐ Updated:

ಅಕ್ಷರ ಗಾತ್ರ : | |

Dr Vivek Murthy

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರು ಸೋಮವಾರ ಘೋಷಿಸಲಿರುವ ಕೊರೊನಾವೈರಸ್ ತಡೆ ಕಾರ್ಯಪಡೆಯಲ್ಲಿ ಇಂಡಿಯನ್–ಅಮೆರಿಕನ್, ಕರ್ನಾಟಕ ಮೂಲದ ಡಾ.ವಿವೇಕ್ ಮೂರ್ತಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ.

ಮೂರ್ತಿ ಅವರನ್ನು 2014ರಲ್ಲಿ ಆಗಿನ ಅಧ್ಯಕ್ಷ ಬರಾಕ್ ಒಬಾಮ ಅವರು ಅಮೆರಿಕದ 19ನೇ ‘ಸರ್ಜನ್ ಜನರಲ್’ ಆಗಿ ನೇಮಕ ಮಾಡಿದ್ದರು. ಬ್ರಿಟನ್‌ನಲ್ಲಿ ಜನಿಸಿರುವ ಮೂರ್ತಿ ಅವರು ಅತಿ ಕಡಿಮೆ ವಯಸ್ಸಿನಲ್ಲೇ (37) ‘ಸರ್ಜನ್ ಜನರಲ್’ ಹುದ್ದೆಗೆ ನೇಮಕಗೊಂಡ ಹೆಗ್ಗಳಿಕೆ ಹೊಂದಿದ್ದಾರೆ. ನಂತರ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅವರು ಹುದ್ದೆ ತೊರೆಯಬೇಕಾಗಿ ಬಂದಿತ್ತು.

ಇದನ್ನೂ ಓದಿ: 

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಶನಿವಾರ ರಾತ್ರಿ ದೇಶದ ಜನತೆಯುನ್ನು ಉದ್ದೇಶಿಸಿ ವಿಲ್‌ಮಿಂಗ್ಟನ್‌ನಲ್ಲಿ ಮಾತನಾಡಿದ್ದ ಬೈಡನ್, ‘ನಮ್ಮ ಕೋವಿಡ್ ತಡೆ ಯೋಜನೆಯ ನೀಲನಕ್ಷೆ ರೂಪಿಸಲು ಪ್ರಮುಖ ವಿಜ್ಞಾನಿಗಳನ್ನು ಹಾಗೂ ತಜ್ಞರನ್ನೊಳಗೊಂಡ ತಂಡವೊಂದನ್ನು ಸೋಮವಾರ ಘೋಷಿಸಲಿದ್ದೇನೆ. 2021ರ ಜನವರಿ 20ರಿಂದ ಯೋಜನೆ ಅನುಷ್ಠಾನಕ್ಕೆ ಬರಲಿದೆ. ವಿಜ್ಞಾನದ ತಳಹದಿಯಲ್ಲೇ ಯೋಜನೆ ರೂಪಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಆದಾಗ್ಯೂ, ಕಾರ್ಯಪಡೆಯನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.

ಕಾರ್ಯಪಡೆಯಲ್ಲಿ ಡಾ. ಮೂರ್ತಿ, ಆಹಾರ ಮತ್ತು ಔಷಧ ಆಡಳಿತದ (ಎಫ್‌ಡಿಎ) ಮಾಜಿ ಆಯುಕ್ತ ಡೇವಿಡ್ ಕೆಸ್ಲರ್ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ಇದನ್ನೂ ಓದಿ: 

‘ಕೆಲವೇ ದಿನಗಳಲ್ಲಿ ಕಾರ್ಯಪಡೆ ಸಭೆ ಆರಂಭವಾಗಲಿದೆ’ ಎಂದೂ ವರದಿ ಉಲ್ಲೇಖಿಸಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಕೊರೊನಾ ವೈರಸ್‌ ವಿಚಾರಗಳಿಗೆ ಸಂಬಂಧಿಸಿ ಬೈಡನ್‌ ಅವರಿಗೆ ಸಲಹೆ ನೀಡುವ ತಂಡದಲ್ಲಿ ಮೂರ್ತಿ ಅವರು ಪ್ರಮುಖರಾಗಿದ್ದರು. ಬೈಡನ್ ಆಡಳಿತದಲ್ಲಿ ಅವರು ಆರೋಗ್ಯ ಕಾರ್ಯದರ್ಶಿಯಾಗಿ ನೇಮಕವಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು