ಮಂಗಳವಾರ, ಜನವರಿ 26, 2021
16 °C

ಟ್ರಂಪ್ ಬೆಂಬಲಿಗರ ವರ್ತನೆಗೆ ಭಾರತೀಯ ಅಮೆರಿಕನ್ ಜನಪ್ರತಿನಿಧಿಗಳ ಬೇಸರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಎಲೆಕ್ಟ್ರೋಲ್ ಮತ ಎಣಿಕೆ ಮತ್ತು ಜೊ ಬೈಡನ್ ವಿಜಯವನ್ನು ಪ್ರಮಾಣಿಕರಿಸುವ ವೇಳೆ ನಡೆಸಿದ ದಾಂದಲೆಯ ಬಗ್ಗೆ ಭಾರತೀಯ ಅಮೆರಿಕನ್ ಜನಪ್ರತಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿರುವ ಕ್ಯಾಪಿಟಲ್ (ಸಂಸತ್‌) ಕಟ್ಟಡದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿತ್ತು. ಈ ಸಮಯದಲ್ಲಿ ಟ್ರಂಪ್ ಬೆಂಬಲಿಗರು ಭದ್ರತೆ ಉಲ್ಲಂಘಿಸಿ ಕಟ್ಟಡದೊಳಗೆ ನುಗ್ಗಿ ಗದ್ದಲ ಎಬ್ಬಿಸಿದರು. ತಕ್ಷಣ ಭದ್ರತಾ ಸಿಬ್ಬಂದಿ ಕಾರ್ಯಪ್ರವೃತರಾದರು. ಭಾರತೀಯ ಅಮೆರಿಕನ್‌ ಜನಪ್ರತಿನಿಧಿಗಳಾದ ಡಾ. ಅಮಿ ಬೇರಾ, ಪ್ರಮೀಳಾ ಜಯಪಾಲ್, ರೊ ಖನ್ನಾ ಮತ್ತು ರಾಜಾ ಕೃಷ್ಣಮೂರ್ತಿ ಅವರನ್ನೂ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.

ಈ ಕುರಿತು ಟ್ವೀಟ್ ಮಾಡಿರುವ ರೊ ಖನ್ನಾ, ‘ನಮಗೆ ಕ್ಯಾನನ್(ಕಟ್ಟಡ)ನಲ್ಲಿ ಆಶ್ರಯ ನೀಡಿದ್ದಾರೆ‘ ಎಂದು ಟ್ವೀಟ್ ಮಾಡಿದ್ದಾರೆ.

‘ಟ್ರಂಪ್ ಅವರನ್ನು ಮತದಾರರು ತಿರಸ್ಕರಿಸಿದ್ದಾರೆ. ಅವರ ಪಕ್ಷ ಅಧಿಕಾರದಲ್ಲಿದ್ದ ರಾಜ್ಯಗಳಲ್ಲೇ ಅವರು ಸೋತಿದ್ದಾರೆ. ಈಗ ಪಕ್ಷದ ಸೆನೆಟ್ ನಾಯಕ ಮತ್ತು ಉಪಾಧ್ಯಕ್ಷರೂ ಟ್ರಂಪ್ ಅವರನ್ನು ತಿರಸ್ಕರಿಸಿದ್ದಾರೆ. ಅಮೆರಿಕನ್ನರಿಗೆ, ತಮ್ಮ ದೇಶದ ಪ್ರಜಾಪ್ರಭುತ್ವ ಇನ್ನೂ ಪವಿತ್ರವಾಗಿದೆ ಎಂದು ಎನಿಸಿದೆ‘ ಎಂದು ಟ್ವೀಟ್‌ ಮಾಡಿದ್ದಾರೆ.

‘ನಾವು ಸುರಕ್ಷಿತವಾಗಿದ್ದೇವೆ‘ ಎಂದು ಟ್ವೀಟ್ ಮಾಡಿರುವ ಪ್ರಮೀಳಾ ಜಯಪಾಲ್, ‘ನಾನು ಹೌಸ್‌ ಫ್ಲೋರ್ ಮೇಲಿರುವ ಗ್ಯಾಲರಿಯಲ್ಲಿದ್ದೇನೆ. ನನ್ನೊಂದಿಗೆ ಇನ್ನಷ್ಟು ಜನಪ್ರತಿನಿಧಿಗಳಿದ್ದಾರೆ. ಮಾಸ್ಕ್‌ನೊಂದಿಗೆ ಸುರಕ್ಷಿತವಾಗಿದ್ದೇವೆ‘ ಎಂದು ಪೋಸ್ಟ್ ಮಾಡಿದ್ದಾರೆ. ಜನಪ್ರತಿನಿಧಿಗಳಾದ ಅಮಿ ಬೇರಾ, ರಾಜಾ ಕೃಷ್ಣಮೂರ್ತಿ ಅವರೂ ಕ್ಯಾನನ್ ಕಟ್ಟಡದೊಳಗಿದ್ದು, ಸುರಕ್ಷಿತವಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಕ್ಯಾನನ್ ಕಟ್ಟಡ ರಾಜಧಾನಿಯ ಪ್ರಮುಖ ಕಚೇರಿಗಳನ್ನು ಹೊಂದಿರುವ  ಪ್ರಮುಖ ಕಟ್ಟಡಗಳಲ್ಲಿ ಒಂದು. ಇದರಲ್ಲಿ ಅಮೆರಿಕದ ಸಂಸತ್ತಿನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಅಧಿಕಾರಿಗಳು ಇರುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು