ಭಾನುವಾರ, ಜೂನ್ 13, 2021
25 °C

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಭಾರತೀಯ ಅಮೆರಿಕನ್ನರ ಮತಪ್ರಮಾಣವೇ ಅಧಿಕ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಕಳೆದ ವರ್ಷ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಏಷ್ಯಾ ಮೂಲದ ಅಮೆರಿಕನ್ನರ ಪೈಕಿ ಭಾರತೀಯ–ಅಮೆರಿಕನ್ನರು ಚಲಾಯಿಸಿದ ಮತಗಳ ಪ್ರಮಾಣವೇ ಅಧಿಕ ಇತ್ತು ಎಂದು ಸಮೀಕ್ಷೆಯೊಂದು ಹೇಳಿದೆ.

ಏಷ್ಯಾ ಮೂಲದ ಇತರ ಸಮುದಾಯಗಳಿಗೆ ಹೋಲಿಸಿದರೆ, ಭಾರತೀಯ–ಅಮೆರಿಕನ್ನರ ಮತ ಚಲಾವಣೆ ಪ್ರಮಾಣ ಶೇ 71ರಷ್ಟು ಇತ್ತು ಎಂದು ಏಷ್ಯನ್‌ ಅಮೆರಿಕನ್ಸ್‌ ಆ್ಯಂಡ್‌ ಪೆಸಿಫಿಕ್‌ ಐಲ್ಯಾಂಡರ್ಸ್ (ಎಎಪಿಐ) ಎಂಬ ಸಂಘಟನೆಯ ಸಂಶೋಧಕ ಕಾರ್ತೀಕ್‌ ರಾಮಕೃಷ್ಣನ್‌ ಹೇಳಿದ್ದಾರೆ.

‘ಯುಎಸ್‌ ಕರೆಂಟ್‌ ಪಾಪ್ಯುಲೇಷನ್‌ ಸರ್ವೆ’ ಎಂಬ ಸಮೀಕ್ಷಾ ವರದಿಯನ್ನು ಉಲ್ಲೇಖಿಸಿ ಅವರು ತಮ್ಮ ಬ್ಲಾಗ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಶೇ 66ರಷ್ಟು ಮತ ಚಲಾವಣೆ ಪ್ರಮಾಣದೊಂದಿಗೆ ಜಪಾನ್‌ ಮೂಲದ ಅಮೆರಿಕನ್ನರು ಎರಡನೇ ಸ್ಥಾನದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

‘2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿನ ಮತ ಚಲಾವಣೆ ಪ್ರಮಾಣಕ್ಕೆ ಹೋಲಿಸಿದರೆ, ಭಾರತೀಯ–ಅಮೆರಿಕನ್ನರ ಮತ ಚಲಾವಣೆ ಪ್ರಮಾಣದಲ್ಲಿ ಶೇ 9ರಷ್ಟು ಹೆಚ್ಚಳ ಕಂಡು ಬಂದಿದೆ. ಜಪಾನೀಯರಿಗೆ ಸಂಬಂಧಿಸಿದಂತೆ ಈ ಪ್ರಮಾಣದಲ್ಲಿ ಶೇ 4ರಷ್ಟು ಹೆಚ್ಚಳ ಇದೆ’ ಎಂದು ರಾಮಕೃಷ್ಣನ್‌ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು, 2016ರಲ್ಲಿ ಕೊರಿಯನ್‌–ಅಮೆರಿಕನ್ನರ ಮತ ಚಲಾವಣೆ ಪ್ರಮಾಣ ಶೇ 45 ಇದ್ದದ್ದು, ಕಳೆದ ವರ್ಷ ಶೇ 60ರಷ್ಟಾಗಿದೆ. ಇದು ಅವರ ಮತ ಚಲಾವಣೆ ಪ್ರಮಾಣದಲ್ಲಿನ ಭಾರಿ ಹೆಚ್ಚಳವಾಗಿದೆ ಎಂದೂ ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು