ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಡನ್‌ ಸಂಪುಟಕ್ಕೆ ವಿವೇಕ್ ಮೂರ್ತಿ, ಅರುಣ್‌ ಮಜುಂದಾರ್‌?

ಆರೋಗ್ಯ ಕಾರ್ಯದರ್ಶಿ ಮತ್ತು ಇಂಧನ ಕಾರ್ಯದರ್ಶಿ ಹುದ್ದೆಗೆ ನೇಮಕಗೊಳ್ಳುವ ಸಾಧ್ಯತೆ
Last Updated 18 ನವೆಂಬರ್ 2020, 7:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರು ತಮ್ಮ ಸಚಿವ ಸಂಪುಟಕ್ಕೆ ಖ್ಯಾತ ವೈದ್ಯ ಡಾ.ವಿವೇಕ್ ಮೂರ್ತಿ ಮತ್ತು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಣ್‌ ಮಜುಂದಾರ್‌ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ವಿವೇಕ್‌ ಮೂರ್ತಿ ಅವರನ್ನು ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಹುದ್ದೆಗೆ ಮತ್ತು ಅರುಣ್‌ ಮಜುಂದಾರ್‌ ಅವರನ್ನು ಇಂಧನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವ ಸಾಧ್ಯತೆ ಇದೆ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿದೆ.

ಪ್ರಸ್ತುತ, ಕೋವಿಡ್‌ಗೆ ಸಂಬಂಧಿಸಿದಂತೆ ಜೋ ಬೈಡನ್‌ ಅವರಿಗೆ ಭಾರತ–ಅಮೆರಿಕನ್‌ ವಿವೇಕ್‌ ಮೂರ್ತಿ ಸಲಹೆ ನೀಡುತ್ತಿದ್ದಾರೆ. ಕೋವಿಡ್‌–19 ನಿಯಂತ್ರಿಸುವ ಕುರಿತು ಇತ್ತೀಚೆಗೆ ರಚಿಸಲಾಗಿರುವ ಸಲಹಾಪಡೆಯ ಮೂರು ಸಹ ಅಧ್ಯಕ್ಷ ಹುದ್ದೆಗಳ ಪೈಕಿ ಒಂದು ಸ್ಥಾನಕ್ಕೆ ಮಂಡ್ಯ ಮೂಲದ ವಿವೇಕ್‌ ಮೂರ್ತಿ ಅವರನ್ನು ಜೋ ಬೈಡನ್‌ ನೇಮಿಸಿದ್ದರು.

ಒಬಾಮ ಅವಧಿಯಲ್ಲಿ 2014–17ರವರೆಗೆ ಅಮೆರಿಕದ 19ನೇ ಸರ್ಜನ್ ಜನರಲ್ ಆಗಿ ಮೂರ್ತಿ ಕಾರ್ಯನಿರ್ವಹಿಸಿದ್ದರು.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪ್ರಾಧ್ಯಾಪಕರಾಗಿರುವ ಅರುಣ್‌ ಅವರು ಇಂಧನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೈಡನ್‌ ಅವರಿಗೆ ಹಿರಿಯ ಸಲಹೆಗಾರರಾಗಿದ್ದಾರೆ.ಸ್ಟ್ಯಾನ್‌ಫೋರ್ಡ್‌ನಲ್ಲಿನ ‘ಅಡ್ವಾನ್ಸ್ಡ್‌ ರಿಸರ್ಚ್‌ ಪ್ರಾಜೆಕ್ಟ್‌ ಏಜನ್ಸಿ’ ಮೊದಲ ನಿರ್ದೇಶಕರಾಗಿಯೂ ಅರುಣ್‌ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT