ಗುರುವಾರ , ಅಕ್ಟೋಬರ್ 1, 2020
28 °C
2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾವಣೆ

ಅಮೆರಿಕ:ಇಬ್ಬರು ಭಾರತೀಯರು ಸೇರಿ 11 ಮಂದಿ ವಿರುದ್ಧ ಕಾನೂನು ಬಾಹಿರ ಮತಚಲಾವಣೆ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಅಮೆರಿಕದ ಪೌರತ್ವ ಹೊಂದಿದ್ದೇವೆಂದು ಸುಳ್ಳು ಮಾಹಿತಿ ನೀಡಿ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಾನೂನುಬಾಹಿರವಾಗಿ ಮತಚಲಾಯಿಸಿದ್ದಾರೆಂದು ಇಲ್ಲಿನ ಫೆಡರಲ್‌ ಸರ್ಕಾರದ ಪರ ವಕೀಲರು ಒಬ್ಬ ಭಾರತೀಯ ಮತ್ತು ಮತ್ತೊಬ್ಬ ಭಾರತೀಯ ಮೂಲದ ಮಲೇಷ್ಯಾದ ವ್ಯಕ್ತಿ ಸೇರಿದಂತೆ ಹನ್ನೊಂದು ವಿದೇಶಿ ವ್ಯಕ್ತಿಗಳ ವಿರುದ್ಧ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪ ಹೊರಿಸಿದ್ದಾರೆ.

ಕಳೆದ ತಿಂಗಳು ಉತ್ತರ ಕೊರೊಲಿನಾದ ಮಿಡ್ಲ್‌ ಡಿಸ್ಟ್ರಿಕ್‌ನ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಭಾರತದ ಬೈಜು ಪೊಟಕುಲತ್‌ ಥಾಮಸ್‌(58) ಹಾಗೂ ಭಾರತೀಯ ಮೂಲದ ಮಲೇಷ್ಯಾದಲ್ಲಿ ನೆಲಸಿರುವ ವ್ಯಕ್ತಿ ರೂಬ್‌ ಕೌರ್ ಅತಾರ್‌ ಸಿಂಗ್‌ (57) ಸೇರಿದಂತೆ ಹನ್ನೊಂದು ಇತರೆ ವಿದೇಶಿ ಪ್ರಜೆಗಳ ಮೇಲೆ ಕಾನೂನು ಬಾಹಿರವಾಗಿ ಮತಚಲಾಯಿಸಿದ್ದಾರೆ ಎಂದು ಫೆಡರಲ್ ಸರ್ಕಾರದ ಪರ ವಕೀಲರು ಆರೋಪ ಹೊರಿಸಿದ್ದಾರೆ. 

ಆರೋಪ ಸಾಬೀತಾದರೆ, ಈ ವ್ಯಕ್ತಿಗಳಿಗೆ ಒಂದು ವರ್ಷದ ಜೈಲು ಶಿಕ್ಷೆ ಮತ್ತು 1 ಲಕ್ಷ ಅಮೆರಿಕನ್ ಡಾಲರ್‌ ದಂಡ ಪಾವತಿಸಬೇಕಾಗುತ್ತದೆ ಎಂದು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್‌ ಜಾರಿನಿರ್ದೇಶನಾಲಯ(ಐಸಿಇ) ಹೋಮ್‌ ಲ್ಯಾಂಡ್ ಸೆಕ್ಯುರಿಟಿ ಇನ್ವೆಸ್ಟಿಗೇಷನ್‌ ಸಂಸ್ಥೆ ತಿಳಿಸಿದೆ.

ಅಮೆರಿಕದ ಕಾನೂನಿನ ಪ್ರಕಾರ ಅಮೆರಿಕದ ಪೌರತ್ವ ಹೊಂದಿರದ ನಾಗರಿಕರು, ಫೆಡರಲ್ ಚುನಾವಣೆಯಲ್ಲಿ ಮತಚಲಾಯಿಸಲು ನೋಂದಣಿ ಮಾಡಿಸಲು ಸಾಧ್ಯವಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು