ಸ್ಯಾನ್ ಫ್ರಾನ್ಸಿಸ್ಕೊ:ಜೂಮ್ ಕಾಲ್‌ನಲ್ಲಿ 900 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದ ವಿಚಾರಕ್ಕೆ ಸಂಬಂಧಿಸಿ ಭಾರಿ ಟೀಕೆಗೆ ಒಳಗಾಗಿದ್ದ ಭಾರತೀಯ ಮೂಲದ ಬೆಟರ್.ಕಾಮ್‌ನ ಸಿಇಒ ವಿಶಾಲ್ ಗಾರ್ಗ್ ಅವರು ಕೆಲಸಕ್ಕೆ ವಾಪಸ್ ಆಗಿದ್ದಾರೆ. ಸಂಸ್ಥೆ ಅವರನ್ನು ಸಿಇಒ ಸ್ಥಾನದಿಂದ ಕೆಳಗಿಳಿಸಿದ ಮುಂದುವರಿಸಿದ ಬಗ್ಗೆ ಕಂಪನಿಯ ಎಲ್ಲ ಸಿಬ್ಬಂದಿಗೆ ಅಸಮಾಧಾನ ಇದೆ ಎನ್ನಲಾಗಿದೆ.

'ಭವಿಷ್ಯಕ್ಕಾಗಿ ಸಮರ್ಥ ಸಿಇಒ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದೇವೆ' ಎಂದು ಬೆಟರ್.ಕಾಮ್‌ವ ನಿರ್ದೇಶಕ ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಟೆಕ್‌ಕ್ರಂಚ್ ವರದಿ ಮಾಡಿದೆ.

ಡಿಜಿಟಲ್ ಮೋರ್ಟ್‌ಗೇಜ್ ಕಂಪನಿಯ ಪೂರ್ಣಾವಧಿ ಸಿಇಒ ಆಗಿ ಗಾರ್ಗ್ ಅವರು ಅಧಿಕೃತವಾಗಿ ಕೆಲಸವನ್ನು ಪುನರಾರಂಭಿಸುತ್ತಿದ್ದಾರೆ. ಇಂತಹ ಪ್ರಮುಖವಾದ ಸಂದರ್ಭದಲ್ಲಿ ಕಂಪನಿಯ ಅಭಿವೃದ್ಧಿಗೆ ವಿಶಾಲ್ ತಂದಿರುವ ಬದಲಾವಣೆಗಳು ಪೂರಕವಾಗಿವೆ. ವಿಶಾಲ್ ಅವರ ಮೇಲೆ ವಿಶ್ವಾಸವಿದೆ ಎಂದು ಮಂಡಳಿ ತಿಳಿಸಿದೆ.

'ಪ್ರತಿಯೊಬ್ಬರು ಬೇಸರಗೊಂಡಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಕೆಲಸವನ್ನು ತೊರೆದಿದ್ದಾರೆ ಅಥವಾ ತೊರೆಯಲು ಯೋಚಿಸುತ್ತಿದ್ದಾರೆ' ಎಂದು ವರದಿಯಾಗಿದೆ.

ಡಿಸೆಂಬರ್ ತಿಂಗಳಲ್ಲಿ ಗಾರ್ಗ್ ಅವರು ಸುಮಾರು 900 ನೌಕರರನ್ನು ಕೆಲಸದಿಂದ ತೆಗೆದುಹಾಕಿದ್ದರು. ಬಳಿಕ ಹಿರಿಯ ಅನೇಕ ಸಿಬ್ಬಂದಿ ಕೆಲಸವನ್ನು ತೊರೆದಿದ್ದರು. ಗಾರ್ಗ್ ನಿರ್ಧಾರದ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾದ ಬೆನ್ನಲ್ಲೆ ಕ್ಷಮೆ ಕೋರಿದ್ದರು. ಬಳಿಕ ರಜೆಯಲ್ಲಿ ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.