ಬುಧವಾರ, ಜೂನ್ 23, 2021
30 °C

ಭಾರತ ಮೂಲದ ಪ್ರೀತಂ ಸಿಂಗ್ ಸಿಂಗಪುರ ವಿರೋಧ ಪಕ್ಷದ ನಾಯಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ಭಾರತೀಯ ಮೂಲದ ಪ್ರೀತಂ ಸಿಂಗ್ ಅವರು ಸಿಂಗಪುರ ಸಂಸತ್ತಿನ ಮೊದಲ ವಿರೋಧ ಪಕ್ಷದ ನಾಯಕರಾಗಿ ಸೋಮವಾರ ಅಧಿಕಾರ ಸ್ವೀಕರಿಸುವ ಮೂಲಕ ಇತಿಹಾಸ ಸೃಷ್ಟಿಸಿದರು.

ಜುಲೈ 10ರಂದು ಸಿಂಗಪುರದ ಒಟ್ಟು 93 ಸಂಸತ್ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಪ್ರೀತಂ ಸಿಂಗ್ ಅವರ ವರ್ಕರ್ಸ್ ಪಕ್ಷವು 10 ಸ್ಥಾನಗಳನ್ನು ಪಡೆದಿತ್ತು. ಆಡಳಿತಾರೂಢ ಆ್ಯಕ್ಷನ್ ಪಕ್ಷ 83 ಸ್ಥಾನಗಳಿಸಿದೆ.

ಇದೇ ಮೊದಲ ಬಾರಿಗೆ ವಿರೋಧ ಪಕ್ಷ 10 ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವರ್ಕರ್ಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೀತಂ ಸಿಂಗ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆರಿಸಲಾಗಿದೆ. 

ಆಡಳಿತಾರೂಢ ಆ್ಯಕ್ಷನ್ ಪಕ್ಷದದಿಂದ (ಪಿಎಪಿ) ಸಂಸತ್ತಿನ ನಾಯಕರಾಗಿರುವ ಇಂದ್ರಾಣಿ ರಾಜನ್ ಕೂಡಾ ಭಾರತೀಯ ಮೂಲದವರು. ಸೋಮವಾರ ಸದನ ಆರಂಭವಾಗುತ್ತಿದ್ದಂತೆಯೇ 43 ವರ್ಷದ ಪ್ರೀತಂ ಸಿಂಗ್ ಅವರನ್ನು ಸಂಸತ್ತಿನ ಮೊದಲ ವಿರೋಧ ಪಕ್ಷದ ನಾಯಕನೆಂದು ಘೋಷಿಸಲಾಯಿತು.

ಪ್ರೀತಂ ಅವರು ತಮಗೆ ಬರುವ ಭತ್ಯೆಯಲ್ಲಿ ಅರ್ಧದಷ್ಟನ್ನು ತಮ್ಮ ಕ್ಷೇತ್ರದ ಬಡ ನಿವಾಸಿಗಳಿಗೆ ಮೀಸಲಿಡಲು ತೀರ್ಮಾನಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು