ಶನಿವಾರ, ಜೂನ್ 19, 2021
23 °C

ಭಾರತದ ಲಸಿಕೆಯು ಜಗತ್ತು ಹೊಂದಿರುವ ಅತ್ಯುತ್ತಮ ಸಂಪತ್ತು: ವಿಶ್ವಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವು ಜಗತ್ತು ಇಂದು ಹೊಂದಿರುವ ಅತ್ಯುತ್ತಮ ಸಂಪತ್ತುಗಳಲ್ಲಿ ಒಂದಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಶ್ಲಾಘಿಸಿದ್ದಾರೆ.

ಕೋವಿಡ್-19 ಪಿಡುಗಿನಿಂದಾಗಿ ಉಂಟಾಗಿರುವ ಜಾಗತಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ವಿಶ್ವದ ರಾಷ್ಟ್ರಗಳಿಗೆ ಭಾರತ ಕೋವಿಡ್-19 ಲಸಿಕೆಗಳನ್ನು ವಿತರಿಸುತ್ತಿರುವುದನ್ನು ವಿಶ್ವಸಂಸ್ಥೆಯು ಮುಕ್ತಕಂಠದಿಂದ ಕೊಂಡಾಡಿದೆ.

ಇಡೀ ವಿಶ್ವವೇ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಾಗ ಕೋವಿಡ್-19 ಲಸಿಕೆ ವಿತರಣೆ ಜಗತ್ತಿನೆಲ್ಲೆಡೆ ಸಾಧ್ಯವಾಗುವಂತೆ ಪ್ರಮುಖ ಪಾತ್ರ ವಹಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದವರು ಭರವಸೆ ವ್ಯಕ್ತಪಡಿಸಿದರು.

ಭಾರತ ಅತ್ಯಾಧುನಿಕ ಔಷಧೀಯ ಕ್ಷೇತ್ರವನ್ನು ಹೊಂದಿದೆ. ಔಷಧಿಗಳ ಉತ್ಪಾದನೆ ಹಾಗೂ ವಿಶ್ವದಾದ್ಯಂತ ವಿತರಿಸಲು ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: 

ಭಾರತದ ಔಷಧಿ ಉತ್ಪಾದನಾ ಸಾಮರ್ಥ್ಯವು ಪ್ರಪಂಚದಲ್ಲಿ ಹೊಂದಿರುವ ಅತ್ಯುತ್ತಮ ಸಂಪತ್ತುಗಳಲ್ಲಿ ಒಂದಾಗಿದೆ. ಜಗತ್ತು ಕೂಡಾ ಇದನ್ನು ಅರಿತುಕೊಂಡಿದೆ ಎಂದು ನಾನು ಭಾವಿಸುತ್ತೇನೆ. ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕಿದೆ. ಜಾಗತಿಕ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಲು ಬೇಕಾಗಿರುವ ಎಲ್ಲ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ತಿಳಿಸಿದರು.

'ಲಸಿಕೆ ಮೈತ್ರಿ' ಅಭಿಯಾನದಡಿಯಲ್ಲಿ ಭಾರತ ಈಗಾಗಲೇ ಒಂಬತ್ತು ದೇಶಗಳಿಗೆ 60 ಲಕ್ಷ ಕೋವಿಡ್-19 ಲಸಿಕೆ ಡೋಸ್‌ಗಳನ್ನು ರವಾನಿಸಿದೆ. ಕ್ರಮೇಣ ವಿಶ್ವಸಂಸ್ಥೆಯ 'ಕೋವ್ಯಾಕ್ಸ್' ಸೌಲಭ್ಯಕ್ಕೂ ಕೋವಿಡ್-19 ಲಸಿಕೆಯನ್ನು ಸರಬರಾಜು ಮಾಡುವ ಗುರಿ ಹೊಂದಿದೆ.

ವಿಶ್ವಸಂಸ್ಥೆಯ ಕೋವ್ಯಾಕ್ಸ್ ಯೋಜನೆಯಡಿಯಲ್ಲಿ ಬಡ ರಾಷ್ಟ್ರಗಳಿಗೂ ತ್ವರಿತ ಹಾಗೂ ಸಮಾನವಾಗಿ ಕೋವಿಡ್-19 ಲಸಿಕೆಗಳು ಲಭ್ಯವಾಗುವಂತೆ ಮಾಡಲು ಸಾಧ್ಯವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು