ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೋನೇಷ್ಯಾ ವಿಮಾನದ ಕಾಕ್‌ಪಿಟ್‌ ರೆಕಾರ್ಡರ್‌ ಪತ್ತೆ

Last Updated 31 ಮಾರ್ಚ್ 2021, 10:17 IST
ಅಕ್ಷರ ಗಾತ್ರ

ಜಕಾರ್ತ: ಕಳೆದ ಜನವರಿಯಲ್ಲಿ 9ರಂದು ಜಾವಾ ಸಮುದ್ರಕ್ಕೆ ಬಿದ್ದು 62 ಮಂದಿ ಸಾವಿಗೆ ಕಾರಣರಾಗಿದ್ದ ಇಂಡೋನೇಷ್ಯಾದ ಶ್ರೀವಿಜಯ ಏರ್‌ಲೈನ್‌ನ ಬೋಯಿಂಗ್‌ 737–500 ವಿಮಾನದ ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡ್‌ರ್‌ ಅನ್ನು ಇಂಡೋನೇಷ್ಯಾ ನೌಕಾಪಡೆಯ ಮುಳುಗು ತಜ್ಞರು ಪತ್ತೆ ಮಾಡಿದ್ದಾರೆ.

ಅಪಘಾತ ಸಂಭವಿಸಿ ಮೂರು ದಿನಗಳ ನಂತರ ಡೇಟಾ ರೆಕಾರ್ಡರ್‌ ಪತ್ತೆ ಮಾಡಿದ ಸ್ಥಳದ ಹತ್ತಿರದಲ್ಲೇ ಈ ಕಾಕ್‌ಪಿಟ್‌ ರೆಕಾರ್ಡರ್‌ ಅನ್ನು ಪತ್ತೆ ಮಾಡಿದ್ದಾರೆ ಎಂದು ಸಾರಿಗೆ ಸಚಿವ ಬುಡಿ ಕಾರ್ಯ ಸುಮಡಿ ಹೇಳಿದ್ದಾರೆ.

ರೆಕಾರ್ಡರ್‌ನಲ್ಲಿ ಏನಿದೆ ಎಂಬ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.ವಾಯ್ಸ್‌ ರೆಕಾರ್ಡರ್ ಹಾನಿಗೊಳಗಾಗಿದ್ದಲ್ಲಿ, ಪತನಕ್ಕೂ ಮುನ್ನ ವಿಮಾನವನ್ನು ನಿಯಂತ್ರಣಕ್ಕೆ ಪಡೆಯಲು ಪೈಲಟ್‌ಗಳು ಏನು ಮಾಡುತ್ತಿದ್ದರು ಅಥವಾ ಯಾವ ರೀತಿ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಅರಿಯಲು ತನಿಖಾಧಿಕಾರಿಗಳಿಗೆ ನೆರವಾಗಬಹುದು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT