ಬುಧವಾರ, ಜನವರಿ 27, 2021
16 °C

ಇಂಡೊನೇಷ್ಯಾ: 62 ಪ್ರಯಾಣಿಕರ ಹೊತ್ತ ವಿಮಾನ ನಾಪತ್ತೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಜಕಾರ್ತ: ಇಂಡೊನೇಷ್ಯಾ ರಾಜಧಾನಿ ಜಕಾರ್ತದಿಂದ ಹೊರಟಿದ್ದ ಶ್ರೀವಿಜಯ ಏರ್‌ನ ವಿಮಾನ ಶನಿವಾರ ನಾಪತ್ತೆಯಾಗಿದೆ. ಇದರಲ್ಲಿ 62 ಜನ ಪ್ರಯಾಣಿಕರಿದ್ದಾರೆ.

ಮಧ್ಯಾಹ್ನ 1.56ಕ್ಕೆ ವಿಮಾನ ಟೇಕಾಫ್‌ ಆಯಿತು. ಮಧ್ಯಾಹ್ನ 2.40ರ ವೇಳೆಗೆ ವಿಮಾನವು (ಬೋಯಿಂಗ್ 737–500) ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಜೊತೆ ಸಂಪರ್ಕ ಕಳೆದುಕೊಂಡಿತು ಎಂದು ಇಂಡೊನೇಷ್ಯಾದ ಸಾರಿಗೆ ಸಚಿವಾಲಯದ ವಕ್ತಾರರಾದ ಅದಿತಾ ಇರಾವತಿ ಹೇಳಿದ್ದಾರೆ.

ಈ ವಿಮಾನವು ಜಕಾರ್ತದಿಂದ ಬೋರ್ನಿಯೊ ದ್ವೀಪದ ವೆಸ್ಟ್‌ ಕಲಿಮಂತಾನ್‌ ಪ್ರಾಂತ್ಯದ ರಾಜಧಾನಿ ಪೊಂಟಿಯಾನಕ್‌ಗೆ ಹೊರಟಿತ್ತು. 56 ಪ್ರಯಾಣಿಕರು ಹಾಗೂ 6 ಜನ ಸಿಬ್ಬಂದಿ ವಿಮಾನದಲ್ಲಿದ್ದಾರೆ ಎಂದು ಶ್ರೀವಿಜಯ ಏರ್‌ನ ಪ್ರಕಟಣೆ ತಿಳಿಸಿದೆ.

‘ವಿಮಾನ ಪತ್ತೆ ಹಾಗೂ ರಕ್ಷಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ನ್ಯಾಷನಲ್‌ ಸರ್ಚ್ ಆ್ಯಂಡ್‌ ರೆಸ್ಕ್ಯೂ ಏಜೆನ್ಸಿ, ನ್ಯಾಷನಲ್ ಟ್ರಾನ್ಸ್‌ಪೋರ್ಟೇಷನ್‌ ಸೇಫ್ಟಿ ಕಮಿಟಿ ಈ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿವೆ’ ಎಂದು ಇರಾವತಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು