ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ ಬಿಕ್ಕಟ್ಟಿಗೆ ಪರಿಹಾರ; ಜಿ-7 ಸಭೆಗೆ ಭಾರತವನ್ನು ಆಹ್ವಾನಿಸಲು ಒತ್ತಾಯ

Last Updated 25 ಆಗಸ್ಟ್ 2021, 7:21 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಫ್ಗಾನಿಸ್ತಾನದ ಬಿಕ್ಕಟ್ಟಿನ ಕುರಿತು ಜಾಗತಿಕ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆಗಾಗಿ ಸಾಮಾನ್ಯ ಮತ್ತು ಏಕರೂಪದ ಪರಿಹಾರವನ್ನು ಕಂಡುಕೊಳ್ಳುವ ಕುರಿತು ಚರ್ಚಿಸಲು ‘ಬ್ಲಾಕ್‌ ಸಭೆ‘ಗಳಲ್ಲಿ ಭಾಗವಹಿಸಲು ಭಾರತವನ್ನು ಆಹ್ವಾನಿಸುವಂತೆ ಜಿ7 ರಾಷ್ಟ್ರಗಳಲ್ಲಿರುವ ಪ್ರಭಾವಿ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ.

ವಿದೇಶಾಂಗ ಸಂಬಂಧಗಳ ಸಮಿತಿಯ ಅಧ್ಯಕ್ಷರೂ ಆಗಿರುವ, ಅಮೆರಿಕದ ಸೆನೆಟರ್‌ ಬಾಬ್‌ ಮೆನೆಂಡೆಜ್‌ ಹಾಗೂ ಅವರ ಸಹವರ್ತಿ ರಾಷ್ಟ್ರಗಳಾದ ಇಟಲಿ, ಫ್ರಾನ್ಸ್‌, ಜರ್ಮನಿ, ಜಪಾನ್, ಬ್ರಿಟನ್ ಮತ್ತು ಯೂರೋಪ್‌ನ ಸಂಸತ್ತಿನ ಸದಸ್ಯರು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ, ಭಾರತದ ಜತೆಗೆ ಅಫ್ರಿಕನ್ ಒಕ್ಕೂಟವನ್ನೂ ಸೂಕ್ತ ಸಂದರ್ಭದಲ್ಲಿ ಜಿ7 ಸಭೆಗೆ ಆಹ್ವಾನಿಸುವಂತೆ ಒತ್ತಾಯಿಸಿದ್ದಾರೆ.

ಅಫ್ಗಾನಿಸ್ತಾನದಿಂದ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಸೇನೆಯನ್ನು ವಾಪಸ್ ಕರೆಸಿಕೊಂಡಿದ್ದನ್ನು ಜಾಗತಿಕ ಸಮುದಾಯವು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸಲು ಜಿ7 ರಾಷ್ಟ್ರಗಳು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿವೆ. ಪ್ರಾದೇಶಿಕ ಸಹಕಾರವನ್ನು ಅದು ಬೆಂಬಲಿಸುತ್ತಿದೆ‘ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಭಯೋತ್ಪಾದನೆ ವಿಸ್ತರಿಸುವ ಸಾಧ್ಯತೆ ಇರುವಾಗ, ಜಿ 7 ಸಭೆಯಲ್ಲಿ ಭಾಗವಹಿಸಲು ಭಾರತವನ್ನು ಆಹ್ವಾನಿಸಬೇಕೆಂದು ನಾವು ಬಯಸುತ್ತೇವೆ. ಇದೇ ಆಫ್ರಿಕಾದ ಹಾರ್ನ್‌ನಲ್ಲೂ ಭಯೋತ್ಪಾದಕ ಚಟುವಟಿಕೆಗಳು ಆರಂಭವಾಗುವ ಸೂಚನೆ ಇದ್ದು, ಅವುಗಳನ್ನು ಹತ್ತಿಕ್ಕಲು ಸೂಕ್ತ ಸಮಯದಲ್ಲಿ ಪ್ರತ್ಯೇಕ ಜಿ 7 ಸಭೆಗಳಿಗೆ ಹಾಜರಾಗಲು ಆಫ್ರಿಕನ್ ಒಕ್ಕೂಟವನ್ನು ಆಹ್ವಾನಿಸಬೇಕು‘ ಎಂದು ಹೇಳಿಕೆಯಲ್ಲಿ ಜನಪ್ರತಿನಿಧಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT