ಭಾನುವಾರ, ನವೆಂಬರ್ 28, 2021
20 °C

ಐಎಸ್‌ಐ ಮುಖ್ಯಸ್ಥರ ನೇಮಕ: ವಾರದಲ್ಲಿ ಇತ್ಯರ್ಥ- ಪಾಕಿಸ್ತಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಐಎಸ್‌ಐನ ಹೊಸ ಮುಖ್ಯಸ್ಥರ ನೇಮಕಾತಿಗೆ ಸಂಬಂಧಿಸಿದ ಸಮಸ್ಯೆಯನ್ನು ಒಂದು ವಾರದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಪಾಕಿಸ್ತಾನ ಆಂತರಿಕ ಸಚಿವ ಶೇಖ್‌ ರಶೀದ್‌ ಅಹ್ಮದ್‌ ಹೇಳಿದ್ದಾರೆ. 

ನೇಮಕಾತಿ ವಿಷಯದಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಜ್ವಾ ನಡುವೆ ಮುಸುಕಿನ ಗುದ್ದಾಟವಿರುವ ಬಗ್ಗೆ ವದಂತಿಗಳ ನಡುವೆಯೇ ಸಚಿವ ರಶೀದ್‌ ಅಹ್ಮದ್ ಈ ಹೇಳಿಕೆ ನೀಡಿದ್ದಾರೆ.‌

ಲೆಫ್ಟಿನೆಂಟ್‌ ಜನರಲ್‌ ನದೀಮ್‌ ಅಹ್ಮದ್‌ ಅಂಜುಮ್‌ ಅವರ ನೇಮಕಾತಿ ಕುರಿತ ಅಧಿಸೂಚನೆ ಬಿಡುಗಡೆ ಮಾಡುವುದು ವಿಳಂಬವಾಗಿದೆ. ಹೀಗಾಗಿ  ಐಎಸ್‌ಐ ಮಹಾನಿರ್ದೇಶಕರ ನೇಮಕಾತಿ ವಿಷಯವು ಸುದ್ದಿಯಲ್ಲಿದೆ. 

ನೇಮಕಾತಿ ವಿಳಂಬಕ್ಕೆ ಕಾರಣ ನೀಡಲು ಸಚಿವ ರಶೀದ್ ಅಹ್ಮದ್‌ ನಿರಾಕರಿಸಿದರು.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು